ಮಾ.22 ಮತ್ತು 23 ರಂದು ಅತ್ಯಾಡಿ ಕುಟುಂಬದ ತರವಾಡು ಮನೆ ಮತ್ತು ಧರ್ಮದೈವ ಉಳ್ಳಾಕುಳು, ಧೂಮಾವತಿ ಮತ್ತು
ವಿಷ್ಣುಮೂರ್ತಿ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0


ಅಜ್ಜಾವರ ಗ್ರಾಮದ ಅತ್ಯಾಡಿ ತರವಾಡು ಮನೆ ಮತ್ತು ಧರ್ಮದೈವ ಉಳ್ಳಾಕುಳು, ಧೂಮಾವತಿ ಮತ್ತು ವಿಷ್ಣುಮೂರ್ತಿ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.೨೨ ಮತ್ತು ೨೩ರಂದು ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಕುಂಟಾರು ಮತ್ತು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.


ಅತ್ಯಾಡಿಯಲ್ಲಿ ವಿಸ್ತಾರವಾದ ಜಾಗದಲ್ಲಿ ದೈವಗಳ ಗುಡಿಗಳನ್ನು ಹಾಗೂ ತರವಾಡು ಮನೆಯನ್ನು ಸುಮಾರು ೧ ಕೋಟಿ ರೂ ವೆಚ್ಚದಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ. ಇದೀಗ ಜೀರ್ಣೋದ್ಧಾರ ಕಾರ್ಯಗಳು ನಡೆದು ಪ್ರತಿಷ್ಠಾ ಮಹೋತ್ಸವ ಕ್ಕೆ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.


ಮಾ.೨೨ರಂದು ಬೆಳಗ್ಗೆ ಉಗ್ರಾಣ ತುಂಬಿಸುವುದು. ಅಪರಾಹ್ನ ಕ್ಷೇತ್ರಕ್ಕೆ ತಂತ್ರಿಗಳ ಆಗಮನವಾಗಲಿದೆ. ರಾತ್ರಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ನಡೆಯುವುದು.


ಮಾ.೨೩ರಂದು ಪೂರ್ವಾಹ್ನ ಗಣಪತಿ ಹೋಮ, ಬಳಿಕ ತರವಾಡು ಮನೆಯ ಗೃಹ ಪ್ರವೇಶ ಹಾಗೂ ಬ್ರಹ್ಮಕಲಶ ಪೂಜೆ ನಡೆಯುವುದು.

ಬೆಳಗ್ಗೆ ೧೧.೨೮ರ ವೃಷಭ ಲಗ್ನದಲ್ಲಿ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ಮಹಾಪೂಜೆ ನಿತ್ಯ ನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ ನಡೆಯುವುದು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುವುದು.