ಅದ್ದೂರಿಯಾಗಿ‌ ಜರುಗಿದ ಉಬರಡ್ಕ ಯುವಕ ಮಂಡಲದ ಸುವರ್ಣ ಮಹೋತ್ಸವ

0

ಸನ್ಮಾನ – ರಸಮಂಜರಿ – ತುಳು ನಾಟಕ

ಉಬರಡ್ಕ ಮಿತ್ತೂರು ಯುವಕ ಮಂಡಲದ ಸುವರ್ಣ ಸಂಭ್ರಮ ‌ಕಾರ್ಯಕ್ರಮ ಮಾ.20ರಂದು ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಬರಡ್ಕ ನರಸಿಂಹ ಶಾಸ್ತಾವು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಗೌಡ ಬಳ್ಳಡ್ಕ ಉದ್ಘಾಟಿಸಿದರು. ಯುವಕ ಮಂಡಲದ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ, ಉಬರಡ್ಕ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಮದುವೆಗದ್ದೆ, ಮಿತ್ತೂರು ನಾಯರ್ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರರಾದ ವೆಂಕಟ್ರಮಣ ಕೆದಂಬಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ರಮೇಶ್, ಸುವರ್ಣಮಹೋತ್ಸವ ಸಮಿತಿ ಗೌರವ ಕಾರ್ಯದರ್ಶಿ ಸೋಮಪ್ಪ ಗೌಡ ಪಾನತ್ತಿಲ, ಪ್ರಧಾನ ಕಾರ್ಯದರ್ಶಿ ಗಂಗಾಧರ ಬರ್ಜೇರಿಗುಂಡಿ, ಯುವಕ ಮಂಡಲದ ಗೌರವಾಧ್ಯಕ್ಷ ರಾಜೇಶ್ ರೈ ಉಬರಡ್ಕ, ಪ್ರಧಾನ ಕಾರ್ಯದರ್ಶಿ ಸಂದೀಪ್ ರೈ ಉಬರಡ್ಕ, ಕೋಶಾಧಿಕಾರಿ ಮನೋಹರ ಕಾಚೇಲು, ಎಸ್ಟೇಟ್ ನೆಕ್ಕಿಲ ಇದರ ರಾಧಾಕೃಷ್ಣ ಪೈ, ಉಬರಡ್ಕ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ವಿನಯ ಕೆಟರರ್ಸ್ ನ ವಿನಯಕುಮಾರ್ ಯಾವಟೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಿತ್ತೂರು ಉಳ್ಳಾಕುಲು ದೊಡ್ಡ ಪೂಜಾರಿ ರವಿರಾಮ ರೈ ಮಿತ್ತೂರು ಇವರನ್ನು ಸನ್ಮಾನಿಸಲಾಯಿತು.
ನಿವೃತ್ತ ಯೋಧರುಗಳಾದ ದಿವಾಕರ ಶೆಟ್ಟಿಹಿತ್ಲು, ವೆಂಕಟ್ರಮಣ ಕೆದಂಬಾಡಿ, ದಿನೇಶ್ ಸುಳ್ಯಕೋಡಿ, ಎಲ್ಯಣ್ಣ ಗೌಡ ಪಾನತ್ತಿಲ, ನಾರಾಯಣ ಪಾಟಾಳಿ ಕುತ್ತಮೊಟ್ಟೆ, ಜಯಪ್ರಕಾಶ್ ಬಿ.ಎಂ ಬಳ್ಳಡ್ಕ, ಶಿವಪ್ರಸಾದ್ ಡಿ.ಕೆ ಪಾಲಡ್ಕ ಹಾಗೂ ಯುವಕ ಮಂಡಲದ ಪೂರ್ವಾಧ್ಯಕ್ಷರುಗಳನ್ನು ಗೌರವಿಸಲಾಯಿತು.


ಸಂಜೆ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಬಾಲಕೃಷ್ಣ ನೆಟ್ಟಾರ್ ಇವರಿಂದ ಸಂಗೀತ ರಸಮಂಜರಿ ನಡೆಯಿತು. ನಂತರ ರಾತ್ರಿ ಚಾ ಪರ್ಕ ಕಲಾವಿದರಿಂದ ರಾಜ್ಯಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರಚಿಸಿ, ನಟಿಸಿ ನಿರ್ದೇಶಿಸಿದ ಬೋಜರಾಜ್ ವಾಮಾಂಜೂರು, ಅರವಿಂದ ಬೋಳಾರ್ ಅಭಿನಯದ ನಾಟಕ ಪನಿಯರ ಆವಂದಿನ ನಡೆಯಿತು. ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ಸೇರಿದ್ದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಗೌರವ ಕಾರ್ಯದರ್ಶಿ ಚಂದ್ರಶೇಖರ ಗೌಡ ಪಾನತ್ತಿಲ ಸ್ವಾಗತಿಸಿದರು.

ಸುವರ್ಣ ಮಹೋತ್ಸವದ ಕಾರ್ಯಾಧ್ಯಕ್ಷ ಹರೀಶ್ ಉಬರಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುವರ್ಣ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ ವಂದಿಸಿದರು. ಅನಘ ಯು.ಆರ್ ಪ್ರಾರ್ಥಿಸಿ, ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು.