ಭರತನಾಟ್ಯ ಸೀನಿಯರ್ ವಿಭಾಗದಲ್ಲಿ ಅಶ್ವಿತಾ ಭಟ್ ನಿಡ್ಮಾರ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

0

2022-23ನೇ ಸಾಲಿನ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಅಶ್ವಿತಾ ಭಟ್ ನಿಡ್ಮಾರ್ ಇವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಈಕೆ ವಿಶ್ವ ಕಲಾನಿಕೇತನ ಪುತ್ತೂರು ಇಲ್ಲಿನ ಗುರುಗಳಾದ ಶ್ರೀಮತಿ ನಯನ ವಿ ರೈ ಹಾಗೂ ಶ್ರೀಮತಿ ಸ್ವಸ್ತಿಕಾ ಆರ್ ಶೆಟ್ಟಿ ಇವರ ಶಿಷ್ಯೆ. ಪುತ್ತೂರಿನ ವಿವೇಕಾನಂದ ಪಿ .ಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈಕೆ,ಬಾಳಿಲ ಗ್ರಾಮದ ನಿಡ್ಮಾರು ಕೃಷ್ಣ ಭಟ್ ಹಾಗೂ ಶಶಿಕಲಾ ಕೆ ಭಟ್ ಇವರ ಪುತ್ರಿ.