ಮಾ. 27: ಕಾಯೇರ್ತಡ್ಕ ಹೊಸಮ್ಮ ದೈವದ ನೇಮೋತ್ಸವ

0


ಶ್ರೀ ಹೊಸಮ್ಮ ದೈವಸ್ಥಾನ ಕೇನ್ಯ ಕಾಯರ್ತಡ್ಕ ಇಲ್ಲಿ 26ನೇ ವರ್ಷದ ಹೊಸಮ್ಮ ದೈವದ ನೇಮೋತ್ಸವ ಮಾ. 27ರಂದು ನಡೆಯಲಿದೆ. ರಾತ್ರಿ 8.00 ಗಂಟೆಗೆ ದೈವದ ಭಂಡಾರ ತೆಗೆದು ನೇಮೋತ್ಸವ ನಡೆಯಲಿದೆ.


ಗುತ್ತಿಗಾರು ಸುಬ್ರಾಯ ಕೆದಿಲಾಯರ ನೇತೃತ್ವದಲ್ಲಿ ಮಾ. 23ರಂದು ರಾತ್ರಿ ದುರ್ಗಾಪೂಜೆ, ಅಘೋರ ಹೋಮ, ಮಾ. 24ರಂದು ಗಣಹೋಮ, ಶ್ರೀ ಸತ್ಯನಾರಾಯಣ ದೇವರ ಪೂಜೆ, ಚಂಡಿಕಾ ಹೋಮ ನೆರವೇರಿತು. ಕಿಶೋರ್ ರೈ ಕಂಡೆಬಾಯಿ ಮತ್ತು ಕುಟುಂಬಸ್ಥರು ಹಾಗೂ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಕ್ತಾದಿಗಳು ನೇಮೋತ್ಸವಕ್ಕೆ ಆಗಮಿಸಿ ದೈವದ ಪ್ರಸಾದ ಸ್ವೀಕರಿಸುವಂತೆ ಕಿಶೋರ್ ರೈ ಕಂಡೆಬಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.