ಕಳಂಜ ವಿಷ್ಣು ನಗರದಲ್ಲಿ ಕಾಣಿಸಿಕೊಂಡ ಬೆಂಕಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿದ ಸ್ಥಳೀಯರು

0

ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ವಿದ್ಯುತ್ ಟ್ರಾನ್ಸ್ ಫಾರ್ಮರ್ ನಿಂದ ಬೆಂಕಿ ಕಿಡಿ ಬಿದ್ದು ಅಲ್ಲಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದ್ದು, ಮಾ. ೨೪ರಂದು ಕಳಂಜದ ವಿಷ್ಣು ನಗರದ ಪಶು ಚಿಕಿತ್ಸಾಲಯದ ಬಳಿ ವಿದ್ಯುತ್ ಲೈನಿನ ಕೆಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರಾದ ನಾಸಿರ್ ಮಹಮ್ಮದ್, ಭಾಸ್ಕರ ಮತ್ತಿತರರು ಬೆಂಕಿಯನ್ನು ನಂದಿಸಿದರು ಎಂದು ತಿಳಿದುಬಂದಿದೆ.