ಮಾ.28-30; ಕಲ್ಲುಗುಂಡಿ ಶ್ರೀಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ

0


ಸಂಪಾಜೆ ಕಲ್ಲುಗುಂಡಿಯ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಮತ್ತು ಪಂಜುರ್ಲಿ ಮತ್ತು ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಸಮ್ಮಾನ ಮಾ.28ರಿಂದ 30ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಮಾ.28ರಂದು ಬೆಳಿಗ್ಗೆ ಗಣಹೋಮ,ರಾತ್ರಿ 7.30ಕ್ಕೆ ಭಂಡಾರ ಆಗಮಿಸಿ ಮೇಲೇರಿಗೆ ಅಗ್ನಿಸ್ಪರ್ಶ,ಕುಲ್ಚಾಟ ಹೊರಡುವುದು. ಮಾ.29ರಂದು ಬೆಳಿಗ್ಗೆ 6ಕ್ಕೆ ಅಗ್ನಿಪ್ರವೇಶ ಬಳಿಕ ಪ್ರಸಾದ ವಿತರಣೆ,ಮಾರಿಕಳ ಪ್ರವೇಶ,ನಂತರ ಸುರಿಗೆಗಳನ್ನು ಒಪ್ಪಿಸುವುದು,ಪ್ರಸಾದ ವಿತರಣೆ ನಡೆಯಲಿದೆ. ಮಾ.30ರಂದು ಮಧ್ಯಾಹ್ನ 1 ಕ್ಕೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಗುಳಿಗದೈವಗಳಿಗೆ ಸಮ್ಮಾನ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಡಳಿತ ಸಮಿತಿ ಯವರು ವಿನಂತಿಸಿದ್ದಾರೆ.