ಕೂತ್ಕುಂಜ : ವರ್ಷಾವಧಿ ನೇಮೋತ್ಸವ

0

ಕೂತ್ಕುಂಜ ಗ್ರಾಮ‌ದ ಹೆಬ್ಬಾರಿತ್ಲು- ಪೇರಳಕಟ್ಟೆ ಇಟ್ಯಡ್ಕ
ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ ಪರಿವಾರ ದೈವಗಳ ದೇವಸ್ಥಾನ ಇದರ ವರ್ಷಾವಧಿ ನೇಮೋತ್ಸವ ಮಾ.24 ರಿಂದ ಮಾ.25 ರ ತನಕ
ಜರುಗಿತು.

ಮಾ.24 ರಂದು ಸಂಜೆ ಹೆಬ್ಬಾರಹಿತ್ಲು ಚಾವಡಿಯಿಂದ ಭಂಡಾರ ಹಿಡಿದು.ಮಾ.25 ರಂದು ಶ್ರೀ ಉಳ್ಳಾಕುಲು ದೈವದ ನೇಮ ಶ್ರೀ ಶಿರಾಡಿ ದೈವದ ನೇಮ, ಶ್ರೀ ಪುರುಷ ಮತ್ತು ಶ್ರೀ ಪರಿವಾರ ದೈವಗಳ ನೇಮ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.ದೈವಸ್ಥಾನದ ಸಮಿತಿಯವರು,ಊರ -ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.