ಪಂಜ : “ಕುದ್ವದಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ” ನಾಮಫಲಕ ಅನಾವರಣ

0

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪಂಜ ಗ್ರಾಮ ಪಂಚಾಯತ್ ವತಿಯಿಂದ ಕುದ್ವದಲ್ಲಿ ನೂತನವಾಗಿ 17 ನಿವೇಶನ ಸೈಟ್ ಗಳು
ಹಂಚಿಕೆಯಾಗಿದ್ದು ಇದಕ್ಕೆ ‘ಅಟಲ್ ಬಿಹಾರಿ ವಾಜಪೇಯಿ ಬಡಾವಣೆ’ ನಾಮಫಲಕ ಅನಾವರಣ ಕಾರ್ಯಕ್ರಮ ಮಾ.27 ರಂದು ಜರುಗಿತು.


ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷ ಡಾ.ರಾಮಯ್ಯ ಭಟ್ ಅನಾವರಣ ಗೊಳಿಸಿ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಸಭಾಧ್ಯಕ್ಷತೆ ವಹಿಸಿದ್ದರು.ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಪೂರ್ವಾಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ,ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು,ಪಂಜ ವನಿತಾ ಸಮಾಜ ಅಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವ , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ ಆರ್ವೇ ದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಶ್ರೀಮತಿ ಚಂದ್ರಕಲಾ ಪ್ರಾರ್ಥಿಸಿದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ ಆರ್
ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕ ಗೈದರು.ಗ್ರಾ.ಪಂ.ಸದಸ್ಯ ನಾರಾಯಣ ಕೃಷ್ಣನಗರ ನಿರೂಪಿಸಿದರು .ಗ್ರಾ.ಪಂ.ಸದಸ್ಯ ಶರತ್ ಕುದ್ವ ವಂದಿಸಿದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಕೃಷ್ಣನಗರ, ಶರತ್ ಕುದ್ವ, ಜಗದೀಶ್ ಪುರಿಯ,ಲಿಖಿತ್ ಪಲ್ಲೋಡಿ, ಚಂದ್ರಶೇಖರ ದೇರಾಜೆ, ಶ್ರೀಮತಿ ಪ್ರಮೀಳಾ ಸಂಪ, ಶ್ರೀಮತಿ ವಿಜಯಲಕ್ಷ್ಮಿ ಕಲ್ಕ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುವರ್ಣಿನಿ ಎನ್ ಎಸ್ , ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ, ಚಿನ್ನಪ್ಪ ಚೊಟ್ಟೆಮಜಲು,ವಾಚಣ್ಣ ಕೆರೆಮೂಲೆ, ಪ್ರಗತಿಪರ ಕೃಷಿಕ ಶಿವರಾಮಯ್ಯ ಕರ್ಮಾಜೆ,ಜೇಸಿಐ ಪಂಜ ಪಂಚಶ್ರೀ ನಿಕಟ ಪೂರ್ವಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು, ಗ್ರಾಮ ಪಂಚಾಯತ್
ಪೂರ್ವಾಧ್ಯಕ್ಷರಾದ ಲಿಗೋಧರ ಆಚಾರ್ಯ, ಶ್ರೀಮತಿ ಮಂಜುಳಾ ಆತ್ಯಡ್ಕ, ಮಾಜಿ ಸದಸ್ಯರಾದ ಲೋಕೇಶ್ ಬರೆಮೇಲು, ರವಿ ಬಿ ನಾಗತೀರ್ಥ, ಶ್ರೀಮತಿ ನಿರ್ಮಲಾ ಪಲ್ಲೋಡಿ, ಶ್ರೀಮತಿ ವಿಮಲಾ ನಾಗತೀರ್ಥ,ಭಜಪಾ ಬೂತ್ ಸಮಿತಿ ಅಧ್ಯಕ್ಷರಾದ ಧರ್ಮಪಾಲ ಕಕ್ಯಾನ, ಚಂದ್ರಶೇಖರ ಮೇಲ್ಪಾಡಿ, ಮೋನಪ್ಪ
ಕೆಬ್ಲಾಡಿ , ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.