ಹಳೆಗೇಟು ಬಳಿ ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ

0

ಸವಾರರಿಗೆ ಗಾಯ, ಸುಳ್ಯ ಆಸ್ಪತ್ರೆಗೆ ದಾಖಲು

ಸುಳ್ಯ ಹಳೆಗೇಟು ಸಮೀಪ ಮಾರ್ಚ್ 28ರಂದು ರಾತ್ರಿ 10 ಗಂಟೆಗೆ ಬುಲೆಟ್ ಬೈಕು ಮತ್ತು ಮತ್ತೊಂದು ಬೈಕಿನ ನಡುವೆ ಮುಖಮುಖಿ ಡಿಕ್ಕಿಯಾಗಿ ಸವಾರರು ಗಾಯಗೊಂಡು ಸುಳ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯದಿಂದ ಪೈಚಾರಿಗೆ ಹೋಗುತ್ತಿದ್ದ ಪೈಚಾರ್ ಮೂಲದ ಯುವಕನ ಬುಲೆಟ್ ಬೈಕು ಗುತ್ತಿಗಾರಿನಿಂದ ಸುಳ್ಯಕ್ಕೆ ಬರುತ್ತಿದ್ದ ಬೈಕಿನ ನಡುವೆ ಡಿಕ್ಕಿ ಸಂಭವಿಸಿ ಎರಡು ಬೈಕಿನ ಸವಾರರು ಗಾಯಗೊಂಡಿರುವಾಗಿ ತಿಳಿದು ಬಂದಿದೆ.