ಅಮರ ಸ್ವಾತಂತ್ರ ಸಂಗ್ರಾಮ ಸಂಸ್ಮರಣಾ ದಿನದ ಪ್ರಯುಕ್ತ ಹೋರಾಟಗಾರರ ಸ್ಮರಣೆ

0

1837 ರ ಅಮರ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಆರಂಭದ ದಿನದ ಪ್ರಯುಕ್ತ ಮಾ.30 ಅಮೈಮಡಿಯೂರು ಶಾಲಾ ವಠಾರದಲ್ಲಿ ಇರುವ 1837 ರ ಸಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಮತ್ತು ಹೋರಾಟ ಗಾರರ ಕಥೆ ಹೇಳುವ ಚಿತ್ರಗಳಿಗೆ ಹಾಗೂ ಅವರ ಹೆಸರುಗಳಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಗೌಡರ ಯುವ ಸೇವಾ ಸಂಘ, ಜ್ಞಾನಧಾಮ ಚಾರಿಟೇಬಲ್ ಟ್ರಸ್ಟ್, ಕೆದಂಬಾಡಿ ಕುಟುಂಬದ ವರು ಹಾಗೂ ಅಮೈಮಡಿಯಾರು ಶಾಲಾ ಸಹಯೋಗದೊಂದಿಗೆ ‌ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಜ್ಞಾನ ಧಾಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮದುವೆಗದ್ದೆ ದಾಮೋದರ ಗೌಡ, ಪ್ರಮುಖರಾದ ಪಿ.ಎಸ್.ಗಂಗಾಧರ, ದೊಡ್ಡಣ್ಣ ಬರೆಮೇಲು, ವೀರಪ್ಪ ಗೌಡ, ಕೆದಂಬಾಡಿ ವೆಂಕಟ್ರಮಣ, ಪದ್ಮನಾಭ ಅತ್ಯಾಡಿ, ಕೆದಂಬಾಡಿ ಮನೆಯವರಾದ ಶ್ರೀಧರ ಗೌಡ, ಗಣೇಶ್ ಗೌಡ, ರತ್ನಾಕರ್ ಗೌಡ,ಕಮಲೇಶ, ಚಂದ್ರಶೇಖರ, ಹರಿಪ್ರಸಾದ್ ಪಾನತ್ತಿಲ, ಜಯಪ್ರಕಾಶ್ ಉರುಂಡೆ, ಶಿವಪ್ರಸಾದ್ ಪಡ್ಪು, ಯಧುಕುಮಾರ, ರಾಹುಲ್, ಓಂಪ್ರಕಾಶ್ ಎನ್, ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಮೊದಲಾದವರಿದ್ದರು.