ಸುಳ್ಯ ಕೆವಿಜಿ ಕ್ಯಾಂಪಸ್ ಬಳಿ ಕ್ಯೂ ಕ್ಲಬ್ ದಿ ಗೇಮರ್ಸ್ ಕೆಫೆ ಶುಭಾರಂಭ

0

ಸುಳ್ಯ ಕೆವಿಜಿ ಕ್ಯಾಂಪಸ್ ಬಳಿ ಕ್ಯೂ ಕ್ಲಬ್ ದಿ ಗೇಮರ್ಸ್ ಕೆಫೆ ಮಾ.31 ರಂದು ಶುಭಾರಂಭಗೊಡಿತು.
ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಒಂದೇ ಸೂರಿನಡಿಯಲ್ಲಿ ಮನರಂಜನಾ ಕ್ರೀಡೆಗಳಾದ ಸ್ನೂಕರ್‌, ಬಿಲ್ಲಿಯಾರ್ಡ್ಸ್,ಕ್ಯಾರಂ,ಪೂಶ್ಬಾಲ್,ಟೇಬಲ್ ಟೆನ್ನಿಸ್,ಚೆಸ್, ಹಾಗೂ ಐವತ್ತು ಹೆಚ್ಚು ಬೋರ್ಡ್ ಗೇಮ್ಸ್ ಗಳನ್ನೊಳಗೊಂಡ ವಿಶಾಲವಾದ ಇಂಡೋರ್ ಅಂಗಣ ಪ್ರಾರಂಭಗೊಂಡಿತು.


ಇದರ ಉದ್ಘಾಟನೆಯನ್ನು ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ ಉದ್ಘಾಟಿಸಿದರು. ಸ್ನೂಕರ್‌ ಬೋರ್ಡ್ ಏರಿಯಾವನ್ನು ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಉದ್ಘಾಟಿಸಿದರು. ಸ್ನೂಕರ್‌ ಬೋರ್ಡ್ ನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರುದತ್ ನಾಯಕ್ ಉದ್ಘಾಟಿಸಿದರು. ಕೆಫೆಯನ್ನು ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡರು ಉದ್ಘಾಟಿಸಿದರು.


ಸಂಸ್ಥೆಯ ಮಾಲಕ ಲಿಖೇಶ್ ರವರ ತಾಯಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಶ್ರೀಮತಿ ಜಯಭಾರತಿ ದ್ವೀಪ ಪ್ರಜ್ವಲನೆ ಮಾಡಿದರು.
ನಗರ ಸದಸ್ಯರಾದ ಶೀಲಾವತಿ ಕುರುಂಜಿ,ಸುದ್ದಿ ಬಿಡುಗಡೆ ಯ ಯಶ್ವಿತ್ ಕಾಳಂಮನೆ, ಉದ್ಯಮಿಗಳಾದ ಶಾಫಿ ಕುತ್ತಮೊಟ್ಟೆ, ಲತೀಶ್ ಗುಂಡ್ಯ,ಅಬ್ದುಲ್ ರಹಿಮಾನ್‌ ಸಂಗಂ,ಕಟ್ಟಡ ಮಾಲಕರಾದ ಅಬ್ದುಲ್ ಖಾದರ್ ಪಟೇಲ್,ವಿಜಯಕುಮಾರ್ ಮಯೂರಿ,ಗಣಪ ಸಾಲಿಯಾನ್,ರಘುನಾಥ್ ಅಲ್ ಸೀಸನ್,ತಾಲೂಕು ಕಛೇರಿ ಉದ್ಯೋಗಿ ನಾರಯಣ,ಮಚಾದೋ ಬಿರಮಂಗಲ,ಶಾಹೀದ್, ಶರೀಫ್,ಉತ್ಸವ್,ನಗರ ಪಂಚಾಯತ್ ಮಾಜಿ ಸದಸ್ಯ ಕಿರಣ್ ಕುರುಂಜಿ, ರವೀಂದ್ರ ಪೈ ಮೊದಲಾದವರು ಉಪಸ್ಥಿತರಿದ್ದರು.


ಮಾಲಕ ಲಿಖೇಶ್ ಸಹೋದರ ಜಿತೇಶ್ ,ಶ್ರೀಮತಿ ವಿದ್ಯಾ ಜಿತೇಶ್ ಸ್ವಾಗತಿಸಿರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ವಿಶಾಲವಾದ ಇಂಡೋರ್ ಗೇಮ್ಸ್ ನಲ್ಲಿ ಎಲ್ಲಾ ರೀತಿಯ ಗೇಮ್ಸ್ ಗಳು ಆಡುವುದರೊಂದಿಗೆ ಅಲ್ಲಿಯೇ ವಿಶೇಷ ಪುಡ್ ಕೋರ್ಟ್ ಪುಡ್ ಕೊರ್ಟ್ ನಲ್ಲಿ ವಿವಿಧ ವೈರಟಿ ಐಸ್ಕ್ರೀಮ್,ಜ್ಯೂಸ್ ಮತ್ತು ಇನ್ನಿತರ ಆಹಾರ ಉತ್ಪನ್ನಗಳು ದೊರೆಯುತ್ತದೆ. ವರ್ಕ್ ಫ್ರಂ ಹೋಮ್ ಲಾಂಚ್ ವ್ಯವಸ್ಥೆ ಕಲ್ಪಿಸಲಾಗಿದೆ.