ಬೊಳಿಯಮಜಲು : ಶ್ರೀ ಶಿರಾಡಿ ರಾಜನ್ ದೈವಸ್ಥಾನ ನೇಮೋತ್ಸವ ; ಗೊನೆಮುಹೂರ್ತ

0


ಜಟ್ಟಿಪಳ್ಳದ ಬೊಳಿಯಮಜಲು ಇಲ್ಲಿನ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ನೇಮೋತ್ಸವ ಎ.9 ಮತ್ತು 10ರಂದು ನಡೆಯಲಿದ್ದು, ಈ ಪ್ರಯುಕ್ತ ಇಂದು ಗೊನೆಮುಹೂರ್ತ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮೋನಪ್ಪ ಗೌಡ ಅಡ್ಕಬಳೆ, ಅಡಳಿತ ಸಮಿತಿ ಅಧ್ಯಕ್ಷ ಕುಲದೀಪ್ ಪೆಲ್ತಡ್ಕ, ಉತ್ಸವ ಸಮಿತಿ ಅಧ್ಯಕ್ಷ ರಘುನಾಥ ಜಟ್ಟಿಪಳ್ಳ, ಸ್ಥಳ ಮೊಕ್ತೇಸರಾದ ಚಂದ್ರಾವತಿ ನಾರಾಯಣ ಕಜೆ, ಪುತ್ರ ನವೀನ್ ಕಜೆ, ಪ್ರದಾನ ಕಾರ್ಯದರ್ಶಿ ಮಾಧವ ಜಟ್ಟಿಪಳ್ಳ, ಕೋಶಾಧಿಕಾರಿ ಪರಮೇಶ್ವರ, ಉತ್ಸವ ಸಮಿತಿ ಕೋಶಾಧಿಕಾರಿ ಚೇತನ್ ಜಟ್ಟಿಪಳ್ಳ, ಉತ್ಸವ ಸಮಿತಿ ಉಪಾಧ್ಯಕ್ಷ ಶಂಕರ ಪಾಂಡಿ, ಕಾರ್ಯದರ್ಶಿ ತೀರ್ಥಪ್ರಸಾದ, ದೈವ ನರ್ತನದ ಮಾಯಿಲ ಬೊಳಿಯಮಜಲು ಮೊದಲಾದವರು ಉಪಸ್ಥಿತರಿದ್ದರು.