ಗಾಂಧಿನಗರ: ಶುಭಶ್ರೀ ಮಹಿಳಾ ಮಂಡಲ ವತಿಯಿಂದ ಮಹಿಳಾ ದಿನಾಚರಣೆ – ಸನ್ಮಾನ

0

ಶುಭಶ್ರೀ ಮಹಿಳಾ ಮಂಡಲ ಗಾಂಧಿನಗರ ಸುಳ್ಯ ಇದರ ವತಿಯಿಂದ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮವು ಗಾಂಧಿನಗರ ಅಂಗನವಾಡಿ ಕೇಂದ್ರ ದಲ್ಲಿ ಮಾ.30 ರಂದು ನಡೆಯಿತು .

ಕಾರ್ಯಕ್ರಮವನ್ನು ಲಯನ್ಸ್ ಅಧ್ಯಕ್ಷೆ ಶ್ರೀಮತಿ ರೂಪಾಶ್ರೀ ಜೆ.ರೈ ಯವರು ಉದ್ಘಾಟಿಸಿ ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಗಾಂಧಿನಗರ ಅಂಗನವಾಡಿ ಕೇಂದ್ರ ದಲ್ಲಿ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾ ಎನ್. ಮತ್ತು ಸಹಾಯಕಿ ಪುಷ್ಪಾವತಿ ಯವರನ್ನು ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.

ಅಂಗನವಾಡಿ ಆಡಳಿತ ಕಮಿಟಿ ಆದ್ಯಕ್ಷ ಜೆ.ಕೆ.ರೈ‌ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ವನಿತಾ, ಶುಭಶ್ರೀ ಮಹಿಳಾ ಮಂಡಲದ ಸದಸ್ಯೆಯರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶ್ರೀಮತಿ ಸುಜಾತ ಎನ್ ಮತ್ತು ಶ್ರೀಮತಿ ಉಷಾ ಜೆ. ಶೆಟ್ಟಿ ಯವರು ಸನ್ಮಾನ ಪತ್ರ ವಾಚಿಸಿದರು.

ಶುಭಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಹರಪ್ರಸಾದ್ ರವರು ಸ್ವಾಗತಿಸಿದರು. ಶ್ರೀಮತಿ ಗಿರಿಜಾ ಎಂ ವಿ. ಪ್ರಾರ್ಥಿಸಿದರು. ಶ್ರೀಮತಿ ಸುನಂದಾ ಶಟ್ಟಿಯವರು ನಿರೂಪಿಸಿ, ಶ್ರೀಮತಿ ಕವಿತಾ ಸಂತೋಷ್ ವಂದಿಸಿದರು.