ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ ನಲ್ಲಿ   ತಿಲಕ ನವೀನ ಪಡುಮಜಲು ( ಆರ್ತಾಜೆ) ರವರು ಅಂತರಾಷ್ಟ್ರೀಯ ಮಟ್ಟಕ್ಕೆ

0

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ
ಮಾ.27, 28, 29,30 ರಂದು ನಡೆದ 2023 ನೇ ಸಾಲಿನ 42ನೇ ರಾಷ್ಟ್ರ ಮಟ್ಟದ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ ನಲ್ಲಿ ಭಾಗವಹಿಸಿ ಜಾಲ್ಸೂರು ಗ್ರಾಮದ ತಿಲಕ ನವೀನ ಪಡುಮಜಲು ( ಆರ್ತಾಜೆ) ರವರು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

100 ಮೀ, 200 ಮೀ,
ಜವಲಿನ್ ಎಸೆತ, 4×100 ರಿಲೆಯಲ್ಲಿ ಪ್ರಥಮ ಮತ್ತು ಲಾಂಗ್ ಜಂಪ್ ನಲ್ಲಿ ದ್ವಿತೀಯ ಸ್ಥಾನ ಪಡೆದು 4 ಚಿನ್ನ, 1ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಇವರು ಮರ್ಕಂಜ ಗ್ರಾಮದ ಕುದ್ಕುಳಿ ದಾಮೋದರ ಮತ್ತು ಪದ್ಮಾವತಿಯವರ ಪುತ್ರಿ.