ಅರಂತೋಡು:ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ವತಿಯಿಂದ ಇಫ್ತಾರ್ ಕೂಟ

0


ಸುಮಾರು 49 ವರ್ಷದಿಂದ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅರಂತೋಡು ಇದರ ವತಿಯಿಂದ ರಂಜಾನ್ ತಿಂಗಳ ಇಫ್ತಾರ್ ಕೂಟ ಬದ್ರಿಯಾ ಜುಮ್ಮಾಮಸೀದಿ ವಠಾರದಲ್ಲಿ ಎ.2 ರಂದು ನಡೆಯಿತು .ಕಾರ್ಯಕ್ರಮದಲ್ಲಿ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ,ಕಾರ್ಯದರ್ಶಿ ಕೆ.ಎಮ್.ಮೂಸಾನ್,ಸಂಸ್ಥೆಯ ಸ್ಥಾಪಕಾಧ್ಯಕ್ಷ ಟಿ.ಎಮ್.ಬಾಬ ಹಾಜಿ ತೆಕ್ಕಿಲ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಮಜೀದ್,ಕಾರ್ಯದರ್ಶಿ ಎ.ಫಸೀಲು,ಪಟೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬದ್ರುದ್ದೀನ್ ಪಟೇಲ್, ಸ್ವಲಾತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್,ಮಾಜಿ ಅಧ್ಯಕ್ಷ ರಾದ ಹಾಜಿ ಮಹಮ್ಮದ್ ,ಹಾಜಿ ಕೆ.ಎಮ್.ಮಹಮ್ಮದ್ ,ಅಬ್ದುಲ್ ಖಾದರ್ ಪಟೇಲ್, ಹಾಜಿ ಅಜರುದ್ದೀನ್,ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ,ಉಮ್ಮರ್ ಎ.ಎ, ಕೆ.ಎಮ್ .ಮನ್ಸೂರ್ ಪಾರೆಕ್ಕಲ್,ಸಂಸ್ಥೆಯ ಮಾಜಿ ಅಧ್ಯಕ್ಷ ರಾದ ಎ. ಹನೀಫ್,ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಅಶೀಕ್ ,ಕಾರ್ಯದರ್ಶಿ ಮುಝಮ್ಮಿಲ್,ಸಂಸುದ್ದೀನ್ ಪೇಲ್ತಡ್ಕ,ಸಾಬಿತ್ ಹುದವಿ, ಸಂಸ್ಥೆಯ ನಿರ್ದೇಶಕರಾದ ಜಾವೇದ್,ತಾಜುದ್ದೀನ್ ಅರಂತೋಡು,ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು .ಶರಫುದ್ದೀನ್,ಮುನೀರ್,ಜುಬೈರ್,ಮುಜೀಬ್,ಮಾಹಿನ್,ಮುಹ್ಸೀನ್ ಸಹಕರಿಸಿದರು.