ಸಂಗೀತ ಜ್ಯೂನಿಯರ್‌ ಗ್ರೇಡ್‌ ಪರೀಕ್ಷೆಯಲ್ಲಿ ಸಂಕೇಸದ ಪೃಥ್ವಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

0


2023 ನೇ ಸಾಲಿನಲ್ಲಿ ನಡೆದ ಸಂಗೀತ  ಜೂನಿಯರ್‌ ಗ್ರೇಡ್‌ ಪರೀಕ್ಷೆಯಲ್ಲಿ ಪೃಥ್ವಿ ಪಿ ಎಂ ಉಮ್ಮಡ್ಕ ಶೇ.98 ಅಂಕ ಪಡೆದು   ಡಿಸ್ಟಿಂಕ್ಷನ್‌ ನಲ್ಲಿ  ತೇರ್ಗಡೆಯಾಗಿದ್ದಾರೆ. ಈಕೆ ಸುನಾದ ಸಂಗೀತ ಕಲಾ ಶಾಲೆಯ ಸುಳ್ಯದ ಶಿಕ್ಷಕರಾದ ವಿದ್ವಾನ್‌ ಕಾಂಚನ ಈಶ್ವರ ಭಟ್‌ ಇವರ ಶಿಷ್ಯೆ. ಇವಳು  ಸಂಕೇಸದ ಪ್ರಶಾಂತ ಉಮ್ಮಡ್ಕ ಹಾಗೂ ಮಧುರಾ ದಂಪತಿಗಳ ಪುತ್ರಿ. ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 7 ನೇತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ.