ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಮಕ್ಕಳ ಬೇಸಿಗೆ ಶಿಬಿರ ಆರಂಭ

0

ಶ್ರೀಹರಿಹರೇಶ್ವರ ದೇವಸ್ಥಾನ, ಹರಿಹರಪಲ್ಲತಡ್ಕದಲ್ಲಿ ಇದರ ಸಹಯೋಗಲ್ಲಿ ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಇದರ ಆಶ್ರಯದಲ್ಲಿ ‘ನಿಸರ್ಗ ಮಕ್ಕಳ ಬೇಸಿಗೆ ಶಿಬಿರ’ದ ಉದ್ಘಾಟನಾ ಸಮಾರಂಭವು ಎ‌.2 ರಂದು ನಡೆಯಿತು. ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಡೋಲಕ್ ಭಾರಿಸಿ, ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಇದರ ಕಾರ್ಯದರ್ಶಿ ರಾಜೇಶ್ ಮೇನಾಲ ಅಧ್ಯಕ್ಷತೆ ವಹಿಸಿದ್ದರು.
ಶ್ರೀಮತಿ ವನಿತಾ ಕೂಜುಗೋಡು ಸ್ವಾಗತಿಸಿದರು, ಭುಕ್ಷಿತ್ ನಿರ್ಪಾಡಿ ವಂದಿಸಿದರು. ಅಜಯ್ ಪೊಯ್ಯೆಮಜಲು ಕಾರ್ಯಕ್ರಮ ನಿರೂಪಿಸಿದರು.