ಉಬರಡ್ಕ:ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು ನಿಧನರಾದ ಪುಟ್ಟಣ್ಣ ಗೌಡ ಮದುವೆಗದ್ದೆ ಇವರಿಗೆ, ಮರಣ ಸಾಂತ್ವನ ನಿಧಿ ರೂ 8000 ವನ್ನು ಮೃತರ ಪತ್ನಿ ಭುವನೇಶ್ವರಿ ಅವರಿಗೆ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ದಾಮೋದರ ಗೌಡ ಮದುವೆಗದ್ದೆ ವಿತರಿಸಿ, ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಪಿ.ಎಸ್. ಗಂಗಾಧರ್, ಜಗದೀಶ್ ಕಕ್ಕೆಬೆಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಸಂಘದ ಸದಸ್ಯರಾದ ಬಾಲಕೃಷ್ಣ ಗೌಡ ಮಾಣಿಬೆಟ್ಟು ಮತ್ತು ಮದುವೆಗದ್ದೆ, ಮಂಡೆಕೋಲು ಕುಟುಂಬಸ್ಥರು, ಮೃತರ ಪುತ್ರ ರೇಣುಕಾಪ್ರಸಾದ್, ಪುತ್ರಿಯರಾದ ತಾರಾಕುಮಾರಿ, ತನುಜಾಕುಮಾರಿ ಉಪಸ್ಥಿತರಿದ್ದರು.