ಬಿಸಿಲ ಝಳಕ್ಕೆ ತತ್ತರಿಸಿದ್ದ ಇಳೆಗೆ ತಂಪೆರೆದ ಮಳೆ

0

ಸುಬ್ರಹ್ಮಣ್ಯದಲ್ಲಿ ಗುಡುಗು ಸಹಿತ ಸುರಿದ ಮಳೆ



ಬಿಸಿಲ ಝಳಕ್ಕೆ ತತ್ತರಿಸಿದ್ದ ಇಳೆಗೆ ವರುಣ ತಂಪೆರೆದಿದ್ದಾನೆ. ಸುಬ್ರಹ್ಮಣ್ಯ ಭಾಗದಲ್ಲಿ ಇಂದು ಸಂಜೆ ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಕಳೆದೊಂದು ತಿಂಗಳಿಂದ ಸುಬ್ರಹ್ಮಣ್ಯದಲ್ಲಿ ಭಾರಿ ಪ್ರಮಾಣದ ಬಿಸಿಲಿನ ತಾಪ ಇದ್ದು, ಕಳೆದ ಎರಡು ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿತ್ತು. ಇಂದು ಸಂಜೆ ಅಲ್ಪ ಮಳೆಯಾಗಿದ್ದು ಅಲ್ಪಮಟ್ಟಿನ ತಂಪಾಗಿರುವುದಾಗಿ ವರದಿಯಾಗಿದೆ.