ಮನಮೋಹನ ಎಚ್. ನಿಧನ

0

ಗುತ್ತಿಗಾರು ಗ್ರಾಮದ ಹೊಸೋಳಿಕೆಯ ಮನಮೋಹನ ಎಚ್. ಎ.2 ರಂದು ಅಲ್ಪಕಾಲದ ಅಸೌಖ್ಯತೆಯಿಂದ ಸುಳ್ಯದ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.
ಅವರು ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆ ಬೊಳ್ವಾರ್ ಪುತ್ತೂರು ಇಲ್ಲಿನ ನಿವೃತ್ತ ಉದ್ಯೋಗಿಯಾಗಿದ್ದರು. ಮೃತರು ಪತ್ನಿ ಇಂದಿರಾ ಎಚ್, ಮಕ್ಕಳಾದ ಆಜ್ಞಾ ಎಚ್ ಎಂ, ಆಕಾಶ್ ಎಚ್ ಎಂ ಹಾಗೂ ಸಹೋದರರು, ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.