ಬೆಳ್ಳಾರೆ ಒತ್ತೆಕೋಲ : ಪೂರ್ವಭಾವಿ ಸಭೆ

0

ಏ. 7-8ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಲಿದ್ದು, ಈ ಬಗ್ಗೆ ಅಂತಿಮ ಪೂರ್ವಭಾವಿ ಸಭೆ ಏ. 5ರಂದು ಅಜಪಿಲ ಒತ್ತೆಕೋಲ ಗದ್ದೆಯಲ್ಲಿ ನಡೆಯಿತು.


ಸಮಿತಿಯ ಅಧ್ಯಕ್ಷರಾದ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ, ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ, ಕೋಶಾಧಿಕಾರಿ ವಸಂತ ಪಡ್ಪು, ನಿಕಟಪೂರ್ವಾಧ್ಯಕ್ಷ ಆನಂದ ಗೌಡ ಪಡ್ಪು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಸಂಜಯ್ ನೆಟ್ಟಾರು ಸ್ವಾಗತಿಸಿ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು. ಸಭೆಯಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು.