ಅರಂಬೂರು ಅಂಬಿಕಾ ಮಹಿಳಾ ಮಂಡಲದಲ್ಲಿ ಉಚಿತ ಯೋಗಾಸನ ಶಿಬಿರ

0

ಅರಂಬೂರು ಅಂಬಿಕಾ ಮಹಿಳಾ ಮಂಡಲದ ವತಿಯಿಂದ ಇಡ್ಯಡ್ಕ ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಉಚಿತ ಯೋಗಾಸನ ಶಿಬಿರವನ್ನು ಇತ್ತೀಚೆಗೆ ನಡೆಸಲಾಯಿತು.
ಶಿಬಿರದ ಸಮಾರೋಪ ಸಮಾರಂಭದಂದು ಯೋಗ ಶಿಕ್ಷಕಿಯರಾದ ಶ್ರೀಮತಿ ಅಕ್ಷತಾ ಶೆಟ್ಟಿ ಮತ್ತು ಶ್ರೀಮತಿ ಉಷಾ ಕೆ. ಇವರನ್ನು ಮಹಿಳಾ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳು, ಭಜನಾ ಮಂದಿರದ ಅಧ್ಯಕ್ಷರು ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಉಪಸ್ಥಿತರಿದ್ದರು.