ಎ.16 : ಬೆಳ್ಳಾರೆಯಲ್ಲಿ ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ಮಾಸಿಕ ಸಭೆ

0

ಸಾಧಕರಿಗೆ ಸನ್ಮಾನ ಮತ್ತು ಆರೋಗ್ಯ ಮಾಹಿತಿ

ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ಮಾಸಿಕ ಸಭೆ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮವು ಬೆಳ್ಳಾರೆ ಮಾವಂಜಿ ಕಾಂಪ್ಲೆಕ್ಸ್ ನ ಹೋಟೆಲ್ ಪಾರಿಜಾತದಲ್ಲಿ ಎ.16 ರಂದು ಪೂ.ಗಂಟೆ 10.30 ಕ್ಕೆ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ಅಧ್ಯಕ್ಷ ಹರಿಶ್ಚಂದ್ರ ಎಂ.ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ,ಸದಾಶಿವ ಚಾರಿಟೇಬಲ್ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಜೋಷಿ,ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪದ್ಮನಾಭ ಬೀಡು, ಜೇಸಿಐ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಅಜಪಿಲ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾಧಕರಾದ ಶ್ರೀಮತಿ ಜಯಲಕ್ಷ್ಮೀ ಉಪೇಂದ್ರ ಪ್ರಭು ಕೋಟೆಮುಂಡುಗಾರು,ಶ್ರೀಮತಿ ಶಶಿಕಲಾ ಬಾಲಕೃಷ್ಣ ನಾಯ್ಕ ಕಜೆಮೂಲೆ, ಶ್ರೀಮತಿ ಸುಲೋಚನಾ ವಿಶ್ವನಾಥ ಕೆ ಕೊಳಂಬಳ ಇವರನ್ನು ಸನ್ಮಾನಿಸಲಾಗುವುದು.
ಡಾ.ಕಾವ್ಯ ಜೆ.ಎಚ್.ರವರು ಕಾಲೋಚಿತ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಮತ್ತು ಆರೋಗ್ಯದ ಗುಣಮಟ್ಟವನ್ನು ಕಾಪಾಡುವಲ್ಲಿ ಆಯುರ್ವೇದ ಮಹತ್ವ ಬಗ್ಗೆ ಮಾಹಿತಿ ನೀಡಲಿದ್ದಾರೆ.