ಕುಜುಂಬಾರು – ಇಜ್ಜಿನಡ್ಕ ಸೇತುವೆಗಾಗಿ ಹಲವು ವರ್ಷದ ಬೇಡಿಕೆ

0

ಈ‌ ಬಾರಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ

ಐನೆಕಿದು‌ ಗ್ರಾಮದ ಕುಜುಂಬಾರು – ಇಜ್ಜಿನಡ್ಕ ಸಂಪರ್ಕ ಸೇತುವೆಗೆ ಈ‌ ಭಾಗದ ನಿವಾಸಿಗಳು 30 ವರ್ಷದಿಂದ ಬೇಡಿಕೆ ಇಡುತ್ತಾ ಬಂದಿದ್ದರೂ ಈ ಭಾಗದಲ್ಲಿ ಸೇತುವೆ ಮರಿಚಿಕೆಯಾಗಿದೆ.

ಇದೀಗ ಈ ಭಾಗದ ಜನರು ಸೇರಿ ಕಲ್ಲಾಜೆ ಜಂಕ್ಷನ್ ನಲ್ಲಿ ಇಂದು ಬೆಳಗ್ಗೆ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.