ಎ.22,23 ರಂದು ಪಾಲ್ತಾಡು ಮನೆಯಲ್ಲಿ ವಿಷ್ಣುಮೂರ್ತಿ ದೈವದ ಬೈಲ ಕೋಲ

0

ಪಾಲ್ತಾಡು ನಾರಾಯಣ ರೈ ಪಟೇಲ್ ಮನೆಯಲ್ಲಿ ಎ.22 ಮತ್ತು 23 ರಂದು ಶ್ರೀ ವಿಷ್ಣುಮೂರ್ತಿ ದೈವದ ಬೈಲ ಕೋಲವು ನಡೆಯಲಿರುವುದು.
ಎ.22 ರಂದು ಸಂಜೆ 5.00 ಗಂಟೆಗೆ ಪಾಲ್ತಾಡು ನಡುಮನೆ ದೈವಸ್ಥಾನದಿಂದ ಭಂಡಾರ ತೆಗೆದು ಬಳಿಕ ಅನ್ನ ಸಂತರ್ಪಣೆಯಾಗಿ ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಿ ಮರುದಿನ ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲವಾಗಿ ಪ್ರಸಾದ ವಿತರಣೆಯಾಗಿ ನಂತರ ಮುಳ್ಳು ಗುಳಿಗ ದೈವದ ಕೋಲವು ನಡೆಯಲಿದೆ.