ಸುಳ್ಯ ಕಸಾಪ ವತಿಯಿಂದ ದುಗ್ಗಲಡ್ಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0


ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ವತಿಯಿಂದ ಉಚಿತವಾಗಿ ನೀಡಲಾಗುವ ಜ್ಞಾನ ಪ್ರಕಾಶ ಪುಸ್ತಕವನ್ನು ಇಂದು ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.


ಕ.ಸಾ.ಪ.ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲುರವರ ನಿರ್ದೇಶನದಂತೆ ಕ.ಸಾ.ಪ.ನಿರ್ದೇಶಕರಾದ ರಮೇಶ್ ನೀರಬಿದಿರೆ ಪುಸ್ತಕ ಹಸ್ತಾಂತರ ಮಾಡಿದರು. ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಕನ್ನಡ ಪುಸ್ತಕಗಳನ್ನು ವಿತರಿಸಲಾಗುತ್ತದೆ. ಮೊಬೈಲ್ ನಿಂದ ದೂರವಿದ್ದು ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿದಾಗ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.


ಶಿಕ್ಷಕರಾದ ಉದಯಕುಮಾರ್ ಸ್ವಾಗತಿಸಿ, ದೈ.ಶಿ.ಶಿಕ್ಷಕ ವೆಂಕಟ್ರಮಣ ವಂದಿಸಿದರು.ಶಿಕ್ಷಕಿ ಗೀತಾ ಉಪಸ್ಥಿತರಿದ್ದರು.ಸುಮಾರು 75 ಪುಸ್ತಕ ವಿತರಿಸಲಾಯಿತು.