ಎಲಿಮಲೆ ನುಸ್ರತ್ ವತಿಯಿಂದ ಇಪ್ತಾರ್ ಕೂಟ, ರಂಜಾನ್ ಕಿಟ್, ವಸ್ತ್ರ ವಿತರಣೆ ಹಾಗೂ ಸನ್ಮಾನ ಹಾಗೂ ಬಿಳ್ಕೊಡುಗೆ ಸಮಾರಂಭ

0

ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಎಲಿಮಲೆ ಇದರ ವತಿಯಿಂದ ಉಲಮಾ ಉಮರಾ ಅನುಸ್ಮರಣೆ,ರಮಳಾನ್ ಕಿಟ್ ವಿತರಣೆ,ಧಾರ್ಮಿಕ ವಿಧ್ಯಾಭ್ಯಾಸದಲ್ಲಿ ಪದವಿಗಳಿಸಿದವರಿಗೆ ಸನ್ಮಾನ ,ಬಿಳ್ಕೊಡುಗೆ ಸಮಾರಂಭ ಹಾಗೂ ಬೃಹತ್ ಇಪ್ತಾರ್ ಕೂಟ ಕಾರ್ಯಕ್ರಮ ಎಲಿಮಲೆ ಮಸೀದಿ ವಠಾರದಲ್ಲಿ ನಡೆಯಿತು.
ಎಲಿಮಲೆ ಮುದರಿಸರಾದ ಜೌಹರ್ ಅಹ್ಸನಿಯವರು ತಹ್ಲೀಲ್ ಸಮರ್ಪಣೆ ಹಾಗೂ ದುವಾ ಪ್ರಾರ್ಥನೆ ಗೆ ನೇತೃತ್ವ ವಹಿಸಿದರು.
ಮಹಮೂದ್ ಸಖಾಫಿಯವರು ಉಲಮಾ ಉಮರಾ ಅನುಸ್ಮರಣಾ ಭಾಷಣಗೈದರು.

ಜಮಾಅತಿಗೊಳಪಟ್ಟ ಬಡ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಿಸಲಾಯಿತು.
ಎಲಿಮಲೆಯಲ್ಲಿ ಮುದರಿಸರಾಗಿ ಸೇವೆಗೈದು ತೆರಳುತ್ತಿರುವ ಜೌಹರ್ ಅಹ್ಸನಿಯವರನ್ನು ಸಮಿತಿ ಪರವಾಗಿ ಜಮಾಅತ್ ಉಪಾಧ್ಯಕ್ಷ ಯೂಸುಫ್ ಪಾಣಾಜೆಯವರು ಶಾಲುಹೊದಿಸಿ ಅಭಿನಂದನಾಪತ್ರ ನೀಡಿ ಗೌರವಿಸಿದರು.
ಇದೇ ಸಂಧರ್ಭದಲ್ಲಿ ಧಾರ್ಮಿಕ ವಿಧ್ಯಾಭ್ಯಾಸದಲ್ಲಿ ಭಿರುದು ಗಳಿಸಿದ ಎಲಿಮಲೆ ಸದರ್ ಮುಅಲ್ಲಿಂ ಫೈಝಲ್ ಸಖಾಫಿ ಕರ್ನೂರು,
ಮೆತ್ತಡ್ಕ ಮದ್ರಸ ಅಧ್ಯಾಪಕರಾದ ಹಮೀದ್ ಸಖಾಫಿ ಬೆಟ್ಟಂಪಾಡಿ, ಹಾಗೂ ಸಲ್ಮಾನುಲ್ ಫಾರಿಸ್ ಹಿಮಮಿಯವರನ್ನು ಸನ್ಮಾನಿಸಲಾಯಿತು.

ಅಸೋಸಿಯೇಶನ್ ಅಧ್ಯಕ್ಷ ಲತೀಫ್ ಹರ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಜಮಾಅತಿಗೊಳಪಟ್ಟ ಉಸ್ತಾದರಿಗೆ ಹಾಗೂ ದರ್ಸ್ ವಿಧ್ಯಾರ್ಥಿಗಳಿಗೆ ವಸ್ತ್ರಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ಲ ಜಿ ಎಸ್. ಸೂಫಿ ಮುಸ್ಲಿಯಾರ್. ಖಜಾಂಚಿ ಕಾದರ್ ಪಾಣಾಜೆ, ಜಮಾಅತ್ ಜತೆ ಕಾರ್ಯದರ್ಶಿ ಹೈದರ್ ಹಾಜಿ, ಜಮಾಅತ್ ಕೋಶಾಧಿಕಾರಿ ಮಹಮೂದ್ ಮುಸ್ಲಿಯಾರ್, ಜೀರ್ಮುಕ್ಕಿ ಮಸೀದಿ ಕಾರ್ಯದರ್ಶಿ ಹನೀಫ್ ಜೀರ್ಮುಕ್ಕಿ , ಮಹಮ್ಮದ್ ಹಾಜಿ ಕೊಲ್ಲಮೊಗ್ರ, ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ನ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.

ನಂತರ ನಡೆದ ಬ್ರಹತ್ ಇಫ್ತಾರ್ ಸಂಗಮದಲ್ಲಿ ನೂರಾರು ಉಪವಾಸಿಗರು ಭಾಗವಹಿಸಿದ್ದರು.
ಸಮಿತಿಯ ಜೊತೆ ಕಾರ್ಯದರ್ಶಿಗಳಾದ ಸಿದ್ದೀಕ್ ಎಲಿಮಲೆ, ಅಶ್ರಫ್ ದಿನಸಿ ಬಜಾರ್, ಹಾರಿಸ್ ಪಳ್ಳಿಕ್ಕಲ್, ಶಿಹಾಬ್ ಎಲಿಮಲೆ, ಅಬ್ದುಲ್ ಕಾದರ್ ಅತ್ತಿಮಾರಡ್ಕ, ಬಾತಿಷಾ, ಆಸಿಫ್ ಹೊಟ್ಟಚೋಡಿ ಮೊದಲಾದವರು ಸಹಕರಿಸಿದರು.
ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.