ಬೊಳ್ಳಾಜೆಯಲ್ಲಿ ತೆಂಗಿನ ಮರದಿಂದ ಬಿದ್ದು ಯುವಕ ದಾರುಣ ಮೃತ್ಯು

0

ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆಯ ಯುವಕನೋರ್ವ ಬೊಳ್ಳಾಜೆ ಎಂಬಲ್ಲಿ ತೆಂಗಿನ ಕಾಯಿ ತೆಗೆಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ವರದಿಯಾಗಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ದಿ|ಕುಂಞ ಎಂಬವರ ಪುತ್ರ ಹರೀಶ (29 ವರ್ಷ ಪ್ರಾಯ) ಎಂಬವರೇ ಮೃತ ವ್ಯಕ್ತಿ.

ಹರೀಶ್ ಇಂದು ಬೆಳಿಗ್ಗೆ ನೆಲ್ಲೂರು ಕೆಮ್ರಾಜೆಯ ಬೊಳ್ಳಾಜೆ ಬಳಿಯ ಕಂದೂರು ಸಚಿನ್‌ ಕೆ ಎಸ್ ಎಂಬವರ ಜಾಗದಲ್ಲಿ ತೆಂಗಿನ ತೆಗೆಯಲು ಈ ಜಾಗವನ್ನು ನೋಡಿಕೊಳ್ಳುತ್ತಿದ್ದ ಮನಮೋಹನ ಕೆ ಎಂಬವರು ತೆಂಗಿನ ಕಾಯಿ ತೆಗೆಯಲು ಇಬ್ಬರನ್ನು ಕರೆಸಿಕೊಂಡಿದ್ದರೆನ್ನಲಾಗಿದೆ. ಮಧ್ಯಾಹ್ನದ ಸುಮಾರಿಗೆ ಹರೀಶರವರು ತೆಂಗಿನ ಮರದಿಂದ ಕಾಯಿ ಕಿತ್ತು ಇಳಿಯುತ್ತಿದ್ದಾಗ ಸ್ಮೃತಿ ತಪ್ಪಿ ಕೆಳಗೆ ಬಿದ್ದರೆನ್ನಲಾಗಿದೆ.
ಕೂಡಲೇ ಅಲ್ಲಿ ಇದ್ದವರು ಅಸ್ಪತ್ರೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟರೆನ್ನಲಾಗಿದೆ‌.

ಮೃತರು ಪತ್ನಿ, ಎರಡು ಮಕ್ಕಳು, ತಾಯಿ ಮತ್ತು ಸಹೋದರ ಸತೀಶ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.