ಕಳಂಜದ ನಿನಾದದಲ್ಲಿ ದಿ. ಕೋಟೆ ವಸಂತಕುಮಾರ್ ನೆನಪು

0

ಸುಗಮ ಸಂಗೀತ ಶಿಬಿರ ಸಮಾರೋಪ

ಶಶಿಧರ ಕೋಟೆ ಮತ್ತು ಸುಪ್ರಿಯಾ ರಘುನಂದನ್ ಅವರಿಂದ ಸಂಗೀತ ಸಂಭ್ರಮ

ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ ಹಿರಿಯ ಸಹಕಾರಿ, ಪತ್ರಕರ್ತರ ಮಿತ್ರ ದಿ. ಕೋಟೆ ವಸಂತಕುಮಾರ್ ನೆನಪು, ಸಂಗೀತ ಸಂಭ್ರಮ ಎ.16 ರಂದು ಸಂಜೆ ನಡೆಯಿತು.

ಎ.13ರಿಂದ ಕರ್ನಾಟಕ ಖ್ಯಾತ ಸುಗಮ ಸಂಗೀತ ಮತ್ತು ಹಿನ್ನೆಲೆ ಗಾಯಕಿ ಶ್ರೀಮತಿ ಸುಪ್ರಿಯಾ ರಘುನಂದನ್ ಮತ್ತು ಗಾಯಕ ಶಶಿಧರ್ ನರಸಿಂಹ ಸ್ವಾಮಿ ಅವರಿಂದ ಉಚಿತ ಸಂಗೀತ ತರಬೇತಿ ಬೆಳಿಗ್ಗೆಯಿಂದ ಸಂಜೆ ತನಕ ನಡೆದಿತ್ತು. ವಿವಿಧ ಶಾಲೆಗಳ 220 ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

ಎ. 16 ರಂದು ಸಂಜೆ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶ್ರೀಮತಿ ಸುಪ್ರಿಯಾ ರಘುನಂದನ್ ಮತ್ತು ಶಶಿಧರ ನರಸಿಂಹ ಸ್ವಾಮಿ ಅವರಿಂದಲೂ ಸಂಗೀತ ಕಾರ್‍ಯಕ್ರಮ ನಡೆಯಿತು.

ಆ ಬಳಿಕ ಕೋಟೆ ವಸಂತ ಕುಮಾರ್ ನೆನಪು ಕಾರ್ಯಕ್ರಮ ನೆರವೇರಿತು. ನಿನಾದ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಐತಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಳಾಲು ಎಸ್‌ಡಿಎಂ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ ಹಾಗೂ ಸುದ್ದಿ ಚಾನೆಲ್ ಕಾರ್ಯಕ್ರಮ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆಯವರು ಕೋಟೆ ವಸಂತಕುಮಾರ್ ಕುರಿತು ನುಡಿನಮನದ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಡಾ.ಶಶಿಧರ್ ಕೋಟೆ, ಸುಪ್ರಿಯಾ ರಘುನಂದನ್, ಶಶಿಧರ ನರಸಿಂಹಸ್ವಾಮಿಯವರನ್ನು ನಿನಾದ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಬಳಿಕ ಖ್ಯಾತ ಗಾಯಕ ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾ. ಶಶಿಧರ್ ಕೋಟೆಯವರಿಂದ ಸಂಗೀತ ಸಂಭ್ರಮ ನಡೆಯಿತು.

ಕೋಟೆ ಅಭಿಮಾನಿಗಳು, ಕಲಾಸಕ್ತರು ನೂರಾರು ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಿನಾದ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ವಸಂತ ಶೆಟ್ಟಿ ಬೆಳ್ಳಾರೆ ಕಾರ್ಯಕ್ರಮದ ಯಶಸ್ಸಿಗೆ ನಿರಂತರ ಶ್ರಮ ವಹಿಸಿದ್ದರು.
ಸುಮಾ ಕೋಟೆ ಸ್ವಾಗತಿಸಿ ಕಾರ್‍ಯಕ್ರಮ ನಿರೂಪಿಸಿದರು. ವಸಂತ ಶೆಟ್ಟಿ ವಂದಿಸಿದರು.