ಸಂಕೇಶ್ ಫೌಂಡೇಶನಿಂದ ಇಬ್ಬರು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಆರ್ಥಿಕ ನೆರವು

0

ಅಮರಪುರಂ ಮಂಡಲದ ಬಸವನಪಲ್ಲಿಯಲ್ಲಿರುವ ಯುನೈಟೆಡ್ ಆಯಿಲ್ ಫ್ಯಾಕ್ಟರಿ ಪ್ರೈವೇಟ್ ಲಿಮಿಟೆಡ್ ಮಾಲಕ ಉದ್ಯಮಿ ಸುಳ್ಯ ಸಂಕೇಶ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್‌ ರಹಿಮಾನ್‌ ಸಂಕೇಶ್ ರವರು ಇಬ್ಬರು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಆರ್ಥಿಕವಾಗಿ ಬೆಂಬಲವಾಗಿ ನಿಂತರು.

ಹಾಲ್ಕೂರು ಗ್ರಾಮದ ತಿಪ್ಪೇಸ್ವಾಮಿ ಅವರದು ಬಡ ಕುಟುಂಬ. ತಿಪ್ಪೇಸ್ವಾಮಿ ಕೆಲ ವರ್ಷಗಳ ಹಿಂದೆ ಇದೇ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಮಗಳು ಚಂದನಾ ಮತ್ತು ಮಗ ಮಾರುತಿ ಪ್ರಸಾದ್ ಇದ್ದಾರೆ. ಚಂದನಾ ಗುಂಟೂರಿನ ಖಾಸಗಿ ಕಾಲೇಜಿನಲ್ಲಿ ಇಂಟರ್ ಓದುತ್ತಿದ್ದಾಳೆ.


ಮಾರುತಿ ಅನಂತಪುರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದಾನೆ. ಈ ಪರಿಸ್ಥಿತಿಯಲ್ಲಿ ಅವರ ತಂದೆ ತಿಪ್ಪೆ ಸ್ವಾಮಿ ಅವರು ವಾರದ ಹಿಂದೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಮೃತರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಮತ್ತು ಮಕ್ಕಳು ಶಿಕ್ಷಣಕ್ಕೆ ವಿದಾಯ ಹೇಳಲು ನಿರ್ಧರಿಸಿದರು. ಈ ವಿಷಯ ತಿಳಿದ ರೆಹಮಾನ್ ರವರು ಮೃತರ ಮನೆಗೆ ತೆರಳಿ ಮಕ್ಕಳ ಬೆಂಬಲಕ್ಕೆ ನಿಂತರು.
ಈ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲು ಆರ್ಥಿಕವಾಗಿ ಸಮಸ್ಯೆಯಿಂದ ಈ ಮಕ್ಕಳಿಗೆ ಶಿಕ್ಷಣವನ್ನು ಮಧ್ಯದಲ್ಲಿ ನಿಲ್ಲಿಸದೆ ಮುಂದುವರಿಸಲು ಅಗತ್ಯ ಆರ್ಥಿಕ ನೆರವು ನೀಡಲಾಗುತ್ತದೆ.
ಈ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಪ್ರತಿ ವರ್ಷ ಭರಿಸುವುದಾಗಿ ಯುನೈಟೆಡ್ ಆಯಿಲ್ ಫ್ಯಾಕ್ಟರಿ ಮಾಲಕ ಸಂಕೇಶ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್‌ ರೆಹಮಾನ್ ಸಂಕೇಶ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು ಹಾಗೂ ಮಕ್ಕಳು ಕೃತಜ್ಞತೆ ಸಲ್ಲಿಸಿದರು.