ದ.ಕ.ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯ ಮಹಾಸಭೆ – ಶ್ರೀ ಸತ್ಯಾನಾರಯಣ ದೇವರ ಪೂಜೆ- ಸಾಧಕರಿಗೆ ಸನ್ಮಾನ

0

ಸುಳ್ಯದ ಪುಟ್ಟ ನಾಯ್ಕ, ಯೋಗೀಶ ಬಟ್ಟಮಡ್ಕ, ಹರೀಶ್ ಮೋಟುಕಾನ ಸೇರಿದಂತೆ 8 ಮಂದಿಗೆ ಗೌರವಾರ್ಪಣೆ

ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ವಾರ್ಷಿಕ ಮಹಾಸಭೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವು
ಏ.22 ರಂದು ಪುತ್ತೂರು ಸುಭದ್ರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧ್ಯಕ್ಷ ಅಶೋಕ‌ ಕೆದಿಲರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಸುಳ್ಯದವರಾಗಿದ್ದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಲಾಯಿತು.
ಮಾಜಿ ಸೈನಿಕರಾದ ಪುಟ್ಟ ನಾಯ್ಕ ಎಲಿಮಲೆ, ಪೋಲೀಸ್ ಇಲಾಖೆಯ ಯೋಗೀಶ್ ನಾಯ್ಕ ಬಟ್ಟಮಡ್ಕ, ಮಂಗಳೂರಿನಲ್ಲಿ ಪರ್ತಕರ್ತರಾಗಿರುವ ಹರೀಶ್ ಮೋಟುಕಾನ, ಭರವಸೆಯ ಬೆಳಕು ಚಾಂದೀನಿ ಪುರುಷೋತ್ತಮ‌ ನಾಯ್ಕ, ಆರೋಗ್ಯ ಕ್ಷೇತ್ರದಲ್ಲಿ ಸರಸ್ವತಿ ಸುಳ್ಯ, ಶಿಕ್ಷಣ ಕ್ಷೇತ್ರದಲ್ಲಿ ಡಾ| ಸಂದೀಪ್ ಕುಮಾರ್, ಕರಾಟೆಯಲ್ಲಿ ಕರಿಷ್ಮಾ ಸುಳ್ಯ, ಕೃಷಿ ಕ್ಷೇತ್ರದಲ್ಲಿ ಪದ್ಮಾವತಿ ಪೆರಾಜೆ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪದ್ಮಶ್ರಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ, ಸಂಘದ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ, ಸಂಚಾಲಕ ಶ್ರೀಧರ ನಾಯ್ಕ ಮುಂಡೋವುಮೂಲೆ ಮೊದಲಾದವರು ಉಪಸ್ಥಿತರಿದ್ದರು.