ವಿಧಾನಸಭಾ ಚುನಾವಣೆ : ಸುಳ್ಯ ಕ್ಷೇತ್ರದಲ್ಲಿ 8 ಮಂದಿ ಕಣದಲ್ಲಿ

0

ಪಕ್ಷೇತರ ಅಭ್ಯರ್ಥಿಯಿಂದ ನಾಮಪತ್ರ ಹಿಂತೆಗೆತ

ವಿಧಾನಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದಿಂದ 8 ಮಂದಿ ಅಂತಿಮ ಕಣದಲ್ಲಿದ್ದಾರೆ.
9 ಮಂದಿ ನಾಮಪತ್ರ ಸಲ್ಲಿಸಿದ್ದು ಅವರಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ಬೂಡುಮಕ್ಕಿ ನಾಮಪತ್ರ ವಾಪಸ್ ಪಡೆದಿದ್ದಾರೆ.

ಉಳಿದಂತೆ ಬಿಜೆಪಿಯಿಂದ ಭಾಗೀರಥಿ ಮುರುಳ್ಯ, ಕಾಂಗ್ರೆಸ್ ನಿಂದ ಕೃಷ್ಣಪ್ಪ, ಜೆಡಿಎಸ್‌ನಿಂದ ಹೆಚ್.ಎಲ್. ವೆಂಕಟೇಶ್, ಎ.ಎ.ಪಿ.ಯಿಂದ ಸುಮನ ಬೆಳ್ಳಾರ್ಕರ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಗಣೇಶ್ ಎಂ, ಉತ್ತಮ ಪ್ರಜಾಕೀಯ ದ ರಮೇಶ್ ಬೂಡು, ಕಲ್ಯಾಣ ರಾಜ್ಯ ಪ್ರಗತಿ ‌ಪಕ್ಷದ ಸುಂದರ ಮೇರ, ಪಕ್ಷೇತರ ಅಭ್ಯರ್ಥಿ ಗುರುವಪ್ಪ ಕಣದಲ್ಲಿದ್ದಾರೆ.

“ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೆ. ಆದರೆ ಆರೋಗ್ಯ ಸಮಸ್ಯೆ ಯಿಂದ ನಾನು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂದು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ ಸತೀಶ್ ಬೂಡುಮಕ್ಕಿ ತಿಳಿಸಿದ್ದಾರೆ