ದುಗ್ಗಲಡ್ಕ 1ನೇ ಮತ್ತು ಕೊಯಿಕುಳಿ 2ನೇ ಕಾಂಗ್ರೆಸ್ ವಾರ್ಡ್ ಸಮಿತಿ ಸಭೆ

0

ಪಕ್ಷದಲ್ಲಿನ ಗೊಂದಲಕ್ಕೆ ಕ್ಷಮೆಯಾಚಿಸದಿದ್ದಲ್ಲಿ ತಟಸ್ಥರಾಗಿರಲು ನಿರ್ಧಾರ

ಸುಳ್ಯ ವಿಧಾನಸಭಾ ಕ್ಷೇತ್ರದ ದುಗ್ಗಲಡ್ಕ ಮತ್ತು ಕೊಯಿಕುಳಿ ಕಾಂಗ್ರೆಸ್ ಬೂತ್ ಸಮಿತಿಯ ಕಾರ್ಯಕರ್ತರ ಸಭೆ ಎ.23ರಂದು ಕೊಳಂಜಿಕೋಡಿಯಲ್ಲಿ ನಡೆಯಿತು.

ಈ ಸಭೆಯಲ್ಲಿ ನಂದಕುಮಾರ್ ಅಭಿಮಾನಿ ಕಾಂಗ್ರೆಸ್ ಕಾರ್ಯಕರ್ತರ ನೈಜತೆಯ ಬಗ್ಗೆ ಮತ್ತು ರಮಾನಾಥ ರೈಯವರನ್ನು ಅವಮಾನಿಸಿರುವುದರ ಬಗ್ಗೆ ಹಾಗೂ ನಂದಕುಮಾರ್ ರವರ ನಡತೆ ಬಗ್ಗೆ ಕೀಳುಮಟ್ಟದಲ್ಲಿ ವರ್ತಿಸಿರುವ ಬಗ್ಗೆ ನಾಯಕರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ದುಗ್ಗಲಡ್ಕ ಮತ್ತು ಕೊಯಿಕುಳಿ ಬೂತ್ ನ ಎಲ್ಲಾ ಕಾರ್ಯಕರ್ತರು ಈ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಯಿಂದ ತಟಸ್ಥ ರಾಗುವುದಾಗಿ ಎರಡೂ ಬೂತ್ ನ ಜಂಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಎರಡೂ ಬೂತ್ ನ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪ್ರಸಕ್ತ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳ ಬಗ್ಗೆ ಹಾಗೂ ದುಗ್ಗಲಡ್ಕ ಬೂತ್ ಸಮಿತಿ ಯವರು ಈ ಹಿಂದೆ ಸಭೆ ಕರೆದು ತಮ್ಮ ನಿಲುವಿನ ಬಗ್ಗೆ ತಿಳಿಸಿದ್ದರೂ ಸಹ ಯಾವುದೇ ನಾಯಕರಾಗಲಿ, ಬ್ಲಾಕ್ ಕಾಂಗ್ರೆಸ್ ಸಮಿತಿಯಾಗಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದಿಲ್ಲ. ಮತ್ತು ಯಾವುದೇ ಮಾತುಕತೆ ನಡೆಸಿಲ್ಲ. ಕಾರ್ಯಕರ್ತರನ್ನು ಕಡೆಗಣನೆ ಮಾಡಿದ್ದಾರೆ. ಇದರಿಂದ ಕಾರ್ಯಕರ್ತರಿಗೆ ನೋವಾಗಿದೆ ಎಂದು ನೋವನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ದುಗ್ಗಲಡ್ಕ, ಮತ್ತು ಕೊಯಿಕುಳಿ ಬೂತ್ ಸಮಿತಿಯ ಅಧ್ಯಕ್ಷರು ಹಾಗೂ 50ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.