ಕಾದ ಇಳೆಗೆ ಮಳೆಯ ತಂಪು

0

ಸುಳ್ಯದಲ್ಲಿ ಗುಡುಗು ಗಾಳಿ ಸಹಿತ ಭರ್ಜರಿ ಮಳೆ

ಕಳೆದೊಂದು ತಿಂಗಳಿನಿಂದ ಸುಡು ಬಿಸಿಲಿನಿಂದ ತತ್ತರಿಸಿದ್ದ ಸುಳ್ಯದಲ್ಲಿ ಇಂದು ಗಾಳಿ ಸಹಿತ ಮಳೆ ಸುರಿದಿದ್ದು, ಕಾದ ಇಳೆಗೆ ತಂಪು ನೀಡಿದೆ.
ಸುಳ್ಯ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಗಾಳಿ ಸಹಿತ ಮಳೆಯಾಗಿದೆ.


ಸುಳ್ಯದ ಜೀವನದಿ ಪಯಸ್ವಿನಿಯಲ್ಲೂ ನೀರು ಖಾಲಿಯಾಗಿದ್ದು, ಅದೆಷ್ಟೋ ಮೀನುಗಳು ಸತ್ತಿದ್ದವು. ಇದೀಗ ಮಳೆ ಸುರಿದು ಜನರು ನಿಟ್ಟುಸಿರು ಬಿಡುವಂತಾಗಿದೆ.