ಪ್ರವೀಣ್ ನೆಟ್ಟಾರು ಕನಸಿನ ಮನೆ ಗೃಹ ಪ್ರವೇಶ

0

ಕುಟುಂಬಸ್ಥರಿಂದ ಮಂಗಳನಿಧಿ ಸಮರ್ಪಣೆ: ಸ್ವಾಮೀಜಿಗಳಿಂದ ಆಶೀರ್ವಚನ


ಪ್ರವೀಣ್ ನೆಟ್ಟಾರು ಪುತ್ಥಳಿ ಅನಾವರಣ

ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಹೆಸರಿನಲ್ಲಿ ಬಿಜೆಪಿ ವತಿಯಿಂದ ನಿರ್ಮಿಸಿ ಕೊಡಲಾದ ” ಪ್ರವೀಣ್ ನಿಲಯದ” ಗೃಹ ಪ್ರವೇಶ ಕಾರ್ಯಕ್ರಮ ಇಂದು ನಡೆಯಿತು. ನಾಯಕರು, ಸ್ವಾಮೀಜಿಗಳ ಸಹಿತ ಸಾವಿರಾರು ಮಂದಿ ಈ ಕ್ಷಣಕ್ಕೆ ಸಾಕ್ಷಿಯಾದರು.


ಬೆಳಿಗ್ಗೆ ಶ್ರೀ ಗಣಪತಿ ಹೋಮ, ಬಳಿಕ ಸತ್ಯನಾರಾಯಣ ಪೂಜೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಮಾಣಿಲ ಸಂಸ್ಥಾನದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಣಿಯೂರು ಮಠದ ಶ್ರೀ ಶ್ರೀ ಮಹಾಬಲನಾಥ ಸ್ವಾಮೀಜಿ, ಸೋಲೂರು ಮಠದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶ್ರೀಮತಿ ಶಕುಂತಲಾ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಜಿಲ್ಲಾ ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ, ಬೂಡಿಯಾರು ರಾಧಾಕೃಷ್ಣ ರೈ, ಬಿಜೆಪಿ ಅಭ್ಯರ್ಥಿಗಳಾದ ಭಾಗೀರಥಿ ಮುರುಳ್ಯ, ಆಶಾ ತಿಮ್ಮಪ್ಪ, ಪಕ್ಷೇತರ ಅಭ್ಯರ್ಥಿ ಅರುಣ್‌ಕುಮಾರ್ ಪುತ್ತಿಲ, ಭಜರಂಗದಳದ ನಾಯಕರಾದ ರಘು ಸಕಲೇಶಪುರ, ಮುರಳಿ ಕೃಷ್ಣ ಹಸಂತಡ್ಕ, ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ, ಬಿಜೆಪಿ ಮುಖಂಡ ರಮೇಶ್ ಹುಬ್ಬಳ್ಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಪದ್ಮರಾಜ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಸೊರಕೆ, ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ಎಸ್.ಎನ್. ಮನ್ಮಥ, ಪುಷ್ಪಾವತಿ ಬಾಳಿಲ, ಶುಭದಾ ರೈ, ಚನಿಯ ಕಲ್ತಡ್ಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನ. ಸೀತಾರಾಮ, ಸುಭಾಶ್ಚಂದ್ರ ಕಳಂಜ, ಡಾ. ಪ್ರಸಾದ್ ಭಂಡಾರಿ, ಬಿಲ್ಲವ ಸಂಘದ ಜಯಂತ ನಡುಬೈಲು ಸೇರಿದಂತೆ ಸಾವಿರಾರು ಮಂದಿ ಸಮಾರಂಭಕ್ಕೆ ಆಗಮಿಸಿದ್ದರು.


ಇದೇ ಸಂದರ್ಭದಲ್ಲಿ ಕುಟುಂಬದ ವತಿಯಿಂದ ಮಂಗಳ ನಿಧಿ ಕಾರ್ಯಕ್ರಮ ನಡೆಯಿತು.
ಮನೆಯ ನಾಮಫಲಕವನ್ನು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅನಾವರಣಗೊಳಿಸಿದರು. ಪ್ರವೀಣ್ ನೆಟ್ಟಾರು ಅವರ ಸಮಾಧಿಯ ಮೇಲೆ ನಿರ್ಮಿಸಲಾದ ಕಂಚಿನ ಪುತ್ಥಳಿಯನ್ನು ಮೋಹನದಾಸ ಪರಮಹಂಸ ಸ್ವಾಮೀಜಿಯವರು ಅನಾವರಣಗೊಳಿಸಿದರು. ಬಿಲ್ಲವ ಸಂಘದ ಮುಖಂಡ ಜಯಂತ ನಡುಬೈಲು ಪುತ್ಥಳಿಗೆ ಹಾರಾರ್ಪಣೆಗೈದರು. ಮನೆ ನಿರ್ಮಿಸಿಕೊಡಲು ಕಾರಣಕರ್ತರಾದ ನಳಿನ್‌ಕುಮಾರ್ ಕಟೀಲ್, ಮನೆ ನಿರ್ಮಾಣ ಮಾಡಿದ ಮೊಗೆರೋಡಿ ಕನ್‌ಸ್ಟ್ರಕ್ಷನ್‌ನ ಸುಧಾಕರ ಶೆಟ್ಟಿ ಹಾಗೂ ಉಸ್ತುವಾರಿಯಲ್ಲಿ ಸಹಕರಿಸಿದ ಆರ್.ಕೆ. ಭಟ್ ಕುರುಂಬುಡೇಲು ಅವರನ್ನು ಸನ್ಮಾನಿಸಲಾಯಿತು.
ಪ್ರವೀಣ್‌ನ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನ, ಸಹೋದರಿಯರಾದ ರೋಹಿಣಿ, ಹರಿಣಿ, ನಳಿನಿ ಅವರು ಆಗಮಿಸಿದವರನ್ನು ಸ್ವಾಗತಿಸಿ ಬರಮಾಡಿಕೊಂಡರು.