ಮೇ.06,07 : ನಿಡುಬೆ ಪೂಜಾರಿಮನೆ ತರವಾಡು ಕುಟುಂಬದ ಧರ್ಮದೈವ, ಪರಿವಾರ ದೈವಗಳ ನಡಾವಳಿ

0

ಐವರ್ನಾಡು ಗ್ರಾಮದ ನಿಡುಬೆ ಪೂಜಾರಿಮನೆ ತರವಾಡು ಕುಟುಂಬದ ಧರ್ಮದೈವ ಶ್ರೀ ರುದ್ರಚಾಮುಂಡಿ ,ಕುಕ್ಕೆತ್ತಿ ಬಳ್ಳು ಮತ್ತು ಪಿಲಿ ಚಾಮುಂಡಿ ದೈವ ಹಾಗೂ ಪರಿವಾರ ದೈವಗಳ ನಡಾವಳಿಯು ಮೇ.06 ಮತ್ತು ಮೇ.07 ರಂದು ನಡೆಯಲಿದೆ.
ಮೇ.6 ರಂದು ಸಂಜೆ ಗಂಟೆ 6.00 ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು.ರಾತ್ರಿ ಗಂಟೆ 7.00 ರಿಂದ ಸತ್ಯಜಾವತೆ ಮತ್ತು ಪಾಷಾಣಮೂರ್ತಿಗಳ ಕೋಲೋತ್ಸವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 10.30 ರಿಂದ ಕೊರತ್ತಿ,ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ಕೋಲೋತ್ಸವ ನಡೆಯಲಿದೆ.
ಮೇ.7 ರಂದು ಪ್ರಾತ: ಕಾಲ ಗಂಟೆ 4.00 ಕ್ಕೆ ಧರ್ಮದೈವ ಶ್ರೀ ರುದ್ರಚಾಮುಂಡಿ ಮತ್ತು ಪಿಲಿಚಾಮುಂಡಿ ದೈವಗಳ ಕೋಲೊತ್ಸವ ನಡೆಯಲಿದೆ.
ಬೆಳಿಗ್ಗೆ ಗಂಟೆ 11.00 ಕ್ಕೆ ಗೋತ್ರದೈವ ಕುಕ್ಕೆತ್ತಿ ಬಳ್ಳು ದೈವಗಳ ನೇಮೋತ್ಸವ ನಡೆಯಲಿದೆ.ಮಧ್ಯಾಹ್ನ ಗಂಟೆ 12.00 ಕ್ಕೆ ಪ್ರಸಾದ ವಿತರಣೆ,ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 1.00 ಕ್ಕೆ ಅಂಗಾರ ಬಾಕುಡ ಮತ್ತು ಗುಳಿಗ ದೈವಗಳಿಗೆ ಕೋಲೋತ್ಸವ ನಡೆಯಲಿದೆ.