ಡಾ. ಆರ್. ಕೆ.‌ ನಾಯರ್ ಅವರಿಗೆ ಜಾರ್ಜ್ ಫೆರ್ನಾಂಡೀಸ್ ರಾಷ್ಟ್ರೀಯ ಅವಾರ್ಡ್

0

ಮುಂಬೈ ಯ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಹಿರಿಯ ರಾಷ್ಟ್ರೀಯ ನಾಯಕರಾಗಿದ್ದ ದಿ.‌ಜಾರ್ಜ್ ಫೆರ್ನಾಂಡೀಸ್ ಅವರ ಹೆಸರಿನಲ್ಲಿ ನೀಡುವ ರಾಷ್ಟ್ರೀಯ ಪ್ರಶಸ್ತಿ 2023 ಕ್ಕೆ ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ. ಆರ್.ಕೆ. ನಾಯರ್ ಭಾಜನರಾಗಿದ್ದಾರೆ.

ಜಾರ್ಜ್ ಫೆರ್ನಾಂಡೀಸ್ ಅವರ 93 ನೇ ಜನ್ಮ ದಿನಾಚರಣೆ ಅಂಗವಾಗಿ ಜೂ. 3 ರಂದು ಮಂಬೈಯ ಬಂಟ್ಸ್ ಸಂಘದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಮೂಲತಃ ಸುಳ್ಯದ ಜಾಲ್ಸೂರಿನವರಾಗಿರುವ ಆರ್.ಕೆ.ನಾಯರ್ ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಉದ್ಯಮಿಯಾಗಿದ್ದು, ಭಾರತದಲ್ಲಿ ಜಪಾನಿ ತಂತ್ರಜ್ಞಾನದ ಮಿಯಾವಕಿ ಅರಣ್ಯ ಬೆಳೆಸುವ ಮೂಲಕ ಬಹಳ ದೊಡ್ಡ ಕ್ರಾಂತಿ ಮಾಡಿ ಗ್ರೀನ್ ಹೀರೋ ಆಫ್ ಇಂಡಿಯಾ ಅನ್ನಿಸಿಕೊಂಡಿದ್ದಾರೆ.