ಸುಬ್ರಹ್ಮಣ್ಯ:”ತತ್ವವಾದದಲ್ಲಿ ಬ್ರಹ್ಮಮೀಮಾಂಸ” ವಿಚಾರ ಸಂಕಿರಣ

0

ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತಿ ಉತ್ಸವದ ಅಂಗವಾಗಿ ಮೇ.3 ರಾತ್ರಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ “ತತ್ವವಾದದಲ್ಲಿ ಬ್ರಹ್ಮಮೀಮಾಂಸ” ಎಂಬ ವಿಚಾರವಾಗಿ ವಿದ್ವತ್ ಗೋಷ್ಠಿ ನೆರವೇರಿತು. ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ವ್ಯಾಸನಕೆರೆ ಪ್ರಭಂಜನ ಆಚಾರ್ಯ ವಹಿಸಿದ್ದರು.


ಗೋಷ್ಠಿಯಲ್ಲಿ ಡಾ.ರಾಮವಿಠಲ ಆಚಾರ್ಯ ಅಂತರ್ಯಾಮಿತ್ವ, ಫಾ.ಡಾ.ಐವನ್.ಡಿ.ಸೋಜಾ ಪರಮ ಮುಖ್ಯ ವೃತ್ತಿ, ಡಾ.ಚತುರ್ವೇದಿ ವೇದವ್ಯಾಸಾಚಾರ್ಯ ಭೇದವಾದ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು. ವಿದ್ವಾಂಸ ಕಿರಣ ಆಚಾರ್ಯ ಸ್ವಾಗತಿಸಿದರು. ವೇದವ್ಯಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸಗ್ರಿ ಆನಂದ ತೀರ್ಥ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ರಾಯಚೂರಿನ ಪಂಡಿತ್ ಶೇಷಗಿರಿದಾಸ್ ಮತ್ತು ಬಳಗದಿಂದ ದಾಸವಾಣಿ ನೆರವೇರಿತು.