ತೊಡಿಕಾನ: ವಲಯ ಮೇಲ್ವಿಚಾರಕರಿಗೆ ಬೀಳ್ಕೊಡುಗೆ

0

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪಾಜೆ ವಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಧೀರ್ ನೆಕ್ರಾಜೆಯವರಿಗೆ ತೊಡಿಕಾನ ಒಕ್ಕೂಟದ ಪರವಾಗಿ ಬೀಳ್ಕೊಡುಗೆ ಹಾಗೂ ಅಭಿನಂದನಾ ಕಾರ್ಯಕ್ರಮ ತೊಡಿಕಾನ ದೇವಸ್ಥಾನದ ಅಕ್ಷಯ ಸಭಾಭವನದಲ್ಲಿ ನಡೆಯಿತು.


ಸುಧೀರ್ ನೆಕ್ರಾಜೆಯವರು ಕಳೆದ 2 ವರ್ಷಗಳಿಂದ ಸಂಪಾಜೆ ವಲಯ ಮೇಲ್ವಿಚಾರಕರಾಗಿದ್ದು ಈಗ ಬೆಂಗಳೂರು ರಾಮನಗರ ತಾಲೂಕಿಗೆ ವರ್ಗಾವಣೆಗೊಂಡಿದ್ದಾರೆ. ಆ ಪ್ರಯುಕ್ತ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ತೊಡಿಕಾನ ಒಕ್ಕೂಟದ ಅಧ್ಯಕ್ಷ ಜನಾರ್ಧನ ಬಾಳೆಕಜೆ ಅಧ್ಯಕ್ಷತೆ ವಹಿಸಿದ್ದರು. ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸನ್ಮಾನಿಸಿದರು. ತೊಡಿಕಾನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ದೇವಸ್ಥಾನದ ವತಿಯಿಂದ ಸುಧೀರ್ ನೆಕ್ರಾಜೆಯವರನ್ನು ಅಭಿನಂದಿಸಿದರು.

ಸಂಪಾಜೆ ವಲಯ ಒಕ್ಕೂಟದ ಅಧ್ಯಕ್ಷ ಹೂವಯ್ಯ ಅಡ್ಯಡ್ಕ, ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪಂಜಿಕೋಡಿ, ತೊಡಿಕಾನ ಸೇವಾ ಪ್ರತಿನಿಧಿ ಸುಂದರ ಬಾಜಿನಡ್ಕ ವೇದಿಕೆಯಲ್ಲಿದ್ದರು. ಒಕ್ಕೂಟದ ಕಾರ್ಯದರ್ಶಿ ಸುರೇಶ್ ದೊಡ್ಡಕುಮೇರಿ ಸ್ವಾಗತಿಸಿದರು. ದೇವಪ್ಪ ಹೈದಂಗೂರು ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಉಪಾಧ್ಯಕ್ಷೆ ಯಶೋಧ ಅಡ್ಯಡ್ಕ, ಕೋಶಾಧಿಕಾರಿ ದಯಾನಂದ ನಾಗನಮೂಲೆ , ಪದಾಧಿಕಾರಿಗಳಾದ ಲತಾ ಪೆರುಂಬಾರು , ರಶ್ಮಿ ನಾಗನಮೂಲೆ , ಹಾಗೂ ಸಂಘಗಳ ಸದಸ್ಯರು ಸಹಕರಿಸಿದರು.


ಅಂತರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಬಹುಮಾನ ವಿಜೇತ ವಿದ್ಯಾ ಬಂಗಾರಕೋಡಿಯವರನ್ನು ಇದೇ ಸಂದರ್ಭದಲ್ಲಿ ಒಕ್ಕೂಟದ ವತಿಯಿಂದ ಅಭಿನಂದಿಸಲಾಯಿತು.