ಭಕ್ತಿ-ಸಂಭ್ರಮದಿಂದ ನಡೆದ ಕಾನತ್ತಿಲ ಉಳ್ಳಾಕುಳ ವರ್ಷಾವಧಿ ನೇಮೋತ್ಸವ

0


ಸುಳ್ಯ ಕಾನತ್ತಿಲ ಶ್ರೀ ಉಳ್ಳಾಕುಲು ದೈವಗಳ ವರ್ಷಾವಧಿ ನೇಮೋತ್ಸವ ಪೂರ್ವ ಸಂಪ್ರದಾಯದಂತೆ ಮೇ.14 ಮತ್ತು 15ರಂದು ನಡೆಯಿತು.
ಎ.26ರಂದು ಗೊನೆ ಕಡಿಯುವುದರೊಂದಿಗೆ ಉತ್ಸವಾದಿ ಕಾರ್ಯಕ್ರಮಗಳು ಆರಂಭಗೊಂಡವು.
ಮೇ.14ರಂದು ಸಂಜೆ ಕುರುಂಜಿ ಮಾಳಿಗೆಯಿಂದ ಭಂಡಾರ ಆಗಮಿಸಿ ರಾತ್ರಿ ಸಂಕ್ರಮಣ ಪೂಜೆ ನಡೆದು ಮೇ.15ರಂದು ಮುಂಜಾನೆ ಉಳ್ಳಾಕುಳ ನೇಮ ನಡಯಿತು.ಬಳಿಕ ಪುರುಷರಾಯರ ಮತ್ತು ಇತರ ದೈವಗಳ ನೇಮ, ಹರಿಕೆ,ಕಾಣಿಕೆ ಸ್ವೀಕಾರ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಮಿತಿಯ ಪದಾಧಿಕಾರಿಗಳು,ಊರ ಪರವೂರ ಭಕ್ರಾಧಿಗಳು ಉಪಸ್ಥಿತರಿದ್ದರು.