ಕೋಲ್ಚಾರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ-ಧಾರ್ಮಿಕ ಸಭೆ

0

ಸಾಮಾನ್ಯ ವ್ಯಕ್ತಿಯು ದೈವತ್ವದ ಸೇವೆಯನ್ನು ಶ್ರದ್ಧೆಯಿಂದ ಪೂರೈಸುವ ಮೂಲಕ ದೇವ ಮಾನವನಾಗಲು ಸಾಧ್ಯ : ಎ.ಎಸ್.ನಿರ್ಮಲ ಕುಮಾರ್

ಕೋಲ್ಚಾರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಆರಂಭದ ದಿನದಂದು ಧಾರ್ಮಿಕ ಸಭಾ ಕಾರ್ಯಕ್ರಮ ಮಹೋತ್ಸವ ಸಮಿತಿ ಅಧ್ಯಕ್ಷ ಭಗೀರಥ ಕೋಲ್ಚಾರು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಧಾರ್ಮಿಕ ಉಪನ್ಯಾಸಕ ಬೆಂಗಳೂರು ಚೆನ್ನೇನಹಳ್ಳಿ ಜನಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎ.ಎಸ್.ನಿರ್ಮಲಕುಮಾರ್ ರವರು ಮಾತನಾಡಿ “ಪರಶಿವನ ಅವತಾರ ಸಂಭೂತನಾಗಿರುವ ವಯನಾಟ್ ಕುಲವನ್ ದೈವದ ಉತ್ಸವ ನಡೆಯುತ್ತಿರುವ ಸುಸಂದರ್ಭದಲ್ಲಿ ಧರ್ಮ ಸಂಸ್ಕೃತಿಯ ಅನಾವರಣವಾಗಲಿ.
ಭಗವಂತನು ಪ್ರತಿಯೊಬ್ಬ ಸೃಷ್ಟಿಯ ಪಾಲನೆ ಮಾಡುತ್ತಾನೆ. ನಮ್ಮ ಜೀವನದಲ್ಲಿ ಶ್ರದ್ಧೆಯಿಂದ ಉತ್ತಮ ಕಾರ್ಯವನ್ನು ಮಾಡಿದರೆ ಸಾಧಕರಾಗಲು ಸಾಧ್ಯವಿದೆ. ಸಾಮಾನ್ಯ ವ್ಯಕ್ತಿಯು ದೈವತ್ವದ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ಪೂರೈಸಿದಾಗ ಬದುಕಿನಲ್ಲಿ ದೇವ ಮಾನವನಾಗಬಹುದು. ಮನೆಯಿಂದ ಮಕ್ಕಳಿಗೆ ಜೀವನದಲ್ಲಿ ಸೇವೆಯೆಂಬ ಧ್ಯೇಯ ಹಾಗೂ ಧರ್ಮ ಸಂಸ್ಕೃತಿ ಆಚಾರ ವಿಚಾರಗಳ ಕುರಿತು ಭೋಧಿಸುವಂತಾಗಬೇಕು. ತಾಯಂದಿರು ಮಕ್ಕಳ ಬೆಳವಣಿಗೆಯ ಬಗ್ಗೆ ಮುತುವರ್ಜಿ ವಹಿಸಿಕೊಂಡು ಸುದೃಢ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಣೆ ನೀಡಬೇಕು. ಜೀವನದಲ್ಲಿ ಪರೋಪಕಾರದ ಚಿಂತನೆ ಅಳವಡಿಸಿಕೊಂಡರೆ ಭಗವಂತನು ನಮಗೆ ಒಲಿಯುತ್ತಾನೆ ಎಂದು ‌ಹೇಳಿದರು.


ವೇದಿಕೆಯಲ್ಲಿ ಕೋಲ್ಚಾರು ಕುಟುಂಬದ ಹಿರಿಯರಾದ ರಾಮಪ್ಪ ಗೌಡ ಕೋಲ್ಚಾರು ಬಿಲ್ಲರಮಜಲು , ನಿವೃತ್ತ ಶಿಕ್ಷಕ ರಾಮಪ್ಪ ಮಾಸ್ತರ್ ಕೋಲ್ಚಾರು,
ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು, ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಚಂದ್ರ ಕೋಲ್ಚಾರು, ಸಂಚಾಲಕ ಸೋಮಶೇಖರ ಕೊಯಿಂಗಾಜೆ, ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಅಧ್ಯಕ್ಷ ಕುಂಞಿಕಣ್ಣ ಬೇಡಗ, ಸ್ಥಾನಿಕರಾದ ರಾಮಚಂದ್ರ ಬೆಳ್ಚಪ್ಪಾಡ,
ಸಮಿತಿ ಕೋಶಾಧಿಕಾರಿ ಮಾಧವ ಗೌಡ ಕೋಲ್ಚಾರು,ಸಮಿತಿ ಸಂಚಾಲಕ ಹರೀಶ್ ಕೊಯಿಂಗಾಜೆ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾಕೋಲ್ಚಾರು,ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬಲ್ಯಾಡಿ ಯವರುಉಪಸ್ಥಿತರಿದ್ದರು.
ವಿನಿತ್ ಕೋಲ್ಚಾರು ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೋಲ್ಚಾರು ಸ್ವಾಗತಿಸಿದರು. ಪದ್ಮ ಕೋಲ್ಚಾರು ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರು
ವಂದಿಸಿದರು.


ಸಮಿತಿ ಸಂಚಾಲಕ ಕುಸುಮಾಧರ ಎ.ಟಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಉಪನ್ಯಾಸಕ ಎ.ಎಸ್.ನಿರ್ಮಲ ಕುಮಾರ್ ಮತ್ತು ಸಮಿತಿ ಸಂಚಾಲಕ ಹರೀಶ್ ಕೊಯಿಂಗಾಜೆ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೋಲ್ಚಾರು ಕುಟುಂಬಸ್ಥರು, ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಸ್ಥಾನಿಕರು, ಭಾರತೀಯ ತೀಯ ಸಮಾಜದ ಪ್ರಾದೇಶಿಕ ಸಮಿತಿಯ ಸದಸ್ಯರು, ಮಹಿಳಾ ಸಮಿತಿ ಸದಸ್ಯರು
ಸ್ಥಳೀಯ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.