ಕೋಲ್ಚಾರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕಂಡನಾರ್ ಕೇಳನ್ ದೈವದ ಉತ್ಸವ

0

ಇಂದು ಸಂಜೆ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ, ಸೂಟೆ ಸಮರ್ಪಣೆ

ಕೋಲ್ಚಾರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ದಿನದಂದು ಇಂದು ಬೆಳಗ್ಗೆ ಶ್ರೀ ಕಂಡನಾರ್ ಕೇಳನ್ ದೈವದ ಉತ್ಸವ ನಡೆಯಿತು. ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಸ್ಥಾನಿಕರು ಹಾಗೂ ಕೋಲ್ಚಾರು ಕುಟುಂಬದ ಹಿರಿಯರು ಮತ್ತು ಕುಟುಂಬಸ್ಥರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದು ದೈವದ ಉತ್ಸವವನ್ನು ಕಣ್ತುಂಬಿಕೊಂಡರು. ಆಗಮಿಸಿದ ಭಕ್ತಾದಿಗಳಿಗೆ ಪ್ರಾತ:ಕಾಲದಿಂದ ನಿರಂತರ ಅನ್ನ ಪ್ರಸಾದ ಹಾಗೂ ಉಪಹಾರದ ವ್ಯವಸ್ಥೆ ನಡೆಯುತ್ತಿದೆ. ಸಂಜೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶವಾಗಿ ಸೂಟೆ ಸಮರ್ಪಣೆಯಾಗಲಿರುವುದು.

ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಕೋಲವು ನಡೆಯಲಿದೆ. ರಾತ್ರಿ ದೈವಸ್ಥಾನದಲ್ಲಿ ಕೈವೀದು ನಡೆದು ದೈವಂಕಟ್ಟು ಮಹೋತ್ಸವ ಸಂಪನ್ನಗೊಳ್ಳಲಿರುವುದು.