ದಯಾನಂದ ರೈ ಮುಪ್ಪೇರ್ಯ ನಿಧನ

0


ಮುಪ್ಪೇರ್ಯ ಗ್ರಾಮದ ಮುಪ್ಪೇರ್ಯ ಮನೆ ದಯಾನಂದ ರೈಯವರು ಅಸೌಖ್ಯದಿಂದ ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 53 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ರೂಪ ಡಿ. ರೈ, ಪುತ್ರಿ ಕು. ಲಿಪಿ ರೈ, ಸಹೋದರರಾದ ಜಗನ್ನಾಥ ರೈ, ಮಹಾಬಲ ರೈ, ಸಹೋದರಿ ಶ್ರೀಮತಿ ಯಶೋಧ ಸೇರಿದಂತೆ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಚಾಲಕರಾಗಿ, ಚಾಲನಾ ತರಬೇತಿ ನೀಡುತ್ತಿದ್ದರು. ಕೆಲವು ತಿಂಗಳ ಹಿಂದೆ ಅಸೌಖ್ಯಗೊಂಡಾಗ ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.