ಶಾಲಾರಂಭಕ್ಕೂ‌ ಮೊದಲು ಮಿತ್ತಡ್ಕ ಮರ್ಕಂಜ ಶಾಲಾ ಮುಖ್ಯ ಶಿಕ್ಷಕಿಯನ್ನು ವರ್ಗಾಯಿಸಿ

0

ಎಸ್.ಡಿ.ಎಂ.ಸಿ. ಒತ್ತಾಯ : ಇಲ್ಲದಿದ್ದರೆ ಬೀಗ ಜಡಿದು ಪ್ರತಿಭಟನೆ

ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡದಿರುವ, ಮಕ್ಕಳಿಗೆ ಬೆದರಿಸುವ, ಎಸ್.ಡಿ.ಎಂ.ಸಿ.ಗೆ ಅಗೌರವ ತೋರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕ – ಮರ್ಕಂಜ ಇಲ್ಲಿಯ ಮುಖ್ಯ ಶಿಕ್ಷಕಿಯನ್ನು ಈ‌ ಬಾರಿಯ ಶಾಲಾರಂಭಕ್ಕೂ ಮುನ್ನ ನಮ್ಮ ಶಾಲೆಯಿಂದ ವರ್ಗಾವಣೆ ಮಾಡಬೇಕು.‌ ಇಲಾಖೆ ಕ್ರಮ ವಹಿಸದಿದ್ದರೆ ಶಾಲೆಗೆ‌ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಮಿತ್ತಡ್ಕ – ಮರ್ಕಂಜ ಎಸ್.ಡಿ.ಎಂ.ಸಿ.‌ ಹೇಳಿದೆ.

ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದರು. ಮಾತನಾಡಿದ ಎಸ್.ಡಿ.ಎಂ.ಸಿ ಅಧ್ಯಕ್ಷೆ ಸಂಧ್ಯಾ ದೋಳ “ಕಳೆದ ಒಂದೂವರೆ ವರ್ಷದಿಂದ ನಮ್ಮ ತಂಡ ಶಾಲಾಭಿವೃದ್ದಿ ಸಮಿತಿಯ ನೇತೃತ್ವ ವಹಿಸಿಕೊಂಡಿದೆ. ಅಲ್ಲಿಂದ ನಾವು ಶಾಲೆಯ ಅಭಿವೃದ್ಧಿಗಾಗಿ ಹೊರಟರೂ ಮುಖ್ಯ ಶಿಕ್ಷಕರು ಸಹಕಾರ ನೀಡುತ್ತಿಲ್ಲ. ಅದು ಯಾಕೆ ಎಂದು ಹೇಳುತ್ತಾರೆ. ಇದರಿಂದ ಶಾಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆದರೂ ನಾವು ಅನುದಾನ ತರಿಸಿದ್ದೇವೆ. ಅದಕ್ಕೂ ಇವರು ಅಡ್ಡಿ ಬರುತ್ತಿದ್ದಾರೆ ಎಂದರು.

ಮಕ್ಕಳಿಗೆ ವಿನಾಕಾರಣ ಗದರಿಸುತ್ತದಾರೆ. ಇದರಿಂದ ಮಕ್ಕಳು ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಾರೆ. ಕೇಳಿದರೆ ನಿಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳಿಸಿ ಎಂದು ನಮಗೆ ಎದುರುತ್ತರ ಕೊಡುತ್ತಾರೆ. ಶಾಲೆಯ ಇತರ ಶಿಕ್ಷಕರೊಂದಿಗೂ ಮುಖ್ಯ ಶಿಕ್ಷಕರಿಗೆ ಹೊಂದಾಣಿಕೆ ಇಲ್ಲ. ಇದೆಲ್ಲವೂ ಪೋಷಕರಿಗೆ ಗೊತ್ತಿದೆ.‌ಸಭೆಯಲ್ಲಿ ಪ್ರಶ್ನಿಸುವುದಿಲ್ಲ. ಅಂದರೆ ಮುಂದೆ ಮಕ್ಕಳಿಗೆ ಮುಖ್ಯ ಶಿಕ್ಷಕಿ ತೊಂದರೆ ನೀಡಿಯಾರು ಎನ್ನುವ ಭಯ ಅವರಲ್ಲಿದೆ.


75 ವರ್ಷದ ಸ್ವಾತಂತ್ರ್ಯ ದಿನಕ್ಕೂ ಅಗೌರವ ತೋರಿಸಿದ್ದಾರೆ. ಈ ಎಲ್ಲ ವಿಚಾರಗಳನ್ನಿಟ್ಟು ನಾವು ಶಿಕ್ಷಣ ಇಲಾಖೆಗೆ ದೂರು ನೀಡಿದರೆ ಅವರು ತೇಪೆ ಹಾಕಿ ಬಿಡುತ್ತಾರೆ.

ನಮ್ಮ ಶಾಲೆಯ ಎಸ್.ಡಿ.ಎಂ.ಸಿ.‌ ಶಾಲೆಯಲ್ಲಿ ಕ್ರಿಯಾತ್ಮಕ ‌ಕೆಲಸ ಮಾಡಿದ್ದರಿಂದ ಜಿಲ್ಲಾ ಮಟ್ಟದ ಪ್ರಶಸ್ತಿ ಬಂದಿದೆ. ಈ ಬಾರಿಯ ಶಾಲಾರಂಭಕ್ಕೂ‌ಮೊದಲು ನಮ್ಮ ಬೇಡಿಕೆಗೆ ಇಲಾಖೆ ಸ್ಪಂದಿಸಿ ಅವರನ್ನು ಬೇರೆಡೆ ವರ್ಗಾಯಿಸಬೇಕು. ಇಲ್ಲದಿದ್ದರೆ ಬೀಗ ಜಟಿದು ಪ್ರತಿಭಟಿಸುತ್ತೇವೆ. ಬೇರೆ ಶಿಕ್ಷರನ್ನು ಕೊಡಲು ಸಾಧ್ಯ ವಿಲ್ಲದಿದ್ದರೆ ಇಲಾಖೆ ಬರೆದು ಕೊಡಲಿ. ನಾವು ದಾನಿಗಳ ಸಹಕಾರ ಪಡೆದು ಶಿಕ್ಷಕರನ್ನು ನಾವೇ ನೇಮಿಸುತ್ತೇವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುತ್ತೇವೆ. ಈಗಿರುವ ಮುಖ್ಯ ಶಿಕ್ಷಕಿ ನಮ್ಮ ಶಾಲೆಗೆ ಬೇಡ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಎಂ.ಸಿ.‌ಸದಸ್ಯರಾದ ಹೇಮಕುಮಾರ್ ಜೋಗಿಮೂಲೆ, ಉಷಾ ಹಲ್ದಡ್ಕ, ಸಂಜೀವ ಅರಮನೆಗಯ, ಗಂಗಾಧರ ದೋಳ, ಸತ್ಯನಾರಾಯಣ ಹಲ್ದಡ್ಕ ಇದ್ದರು.