ಗಾಳಿ ಮಳೆಗೆ ಪಂಜ ಪರಿಸರದಲ್ಲಿ ಹಾನಿ

0

ಪಂಜ ಪರಿಸರದಲ್ಲಿ ಮೇ.18 ರಂದು ಸಂಜೆ ಭಾರೀ ಗಾಳಿ ‌ಮಳೆಗೆ ಕೆಲವು ಕಡೆ ಹಾನಿಯಾದ ಘಟನೆ ವರದಿಯಾಗಿದೆ
ಪಂಜ ಗ್ರಾಮ ಪಂಚಾಯತ್ ಸಮೀಪವಿರುವ ಮರವೊಂದು ಅರ್ಧದಿಂದ ಮುರಿದು ಬಿದ್ದು ಗ್ರಾಮ ಒನ್ ಕಚೇರಿಯ ಕಟ್ಟದ ಶೀಟ್ ಪುಡಿ ಯಾಗಿದ್ದು ಮತ್ತು ಮಾಡಿಗೆ ಹಾನಿಯಾಗಿದೆ.

ಅದರ ಸಮೀಪ ಇರುವ ಗ್ರಾಮ ಪಂಚಾಯತ್ ಕಟ್ಟಡದ ಶೀಟಿಗೆ ಹಾನಿಯಾಗಿದೆ.ಪಂಜ ಚರ್ಚ್ ಗೇಟ್ ಬಳಿ ಅಂಗಡಿ ಎದುರಿನ ಕಟ್ಟಡದ ಶೀಟ್ ಹಾರಿ ಹೋಗಿದೆ.ಪಂಜ ಪೇಟೆಯಲ್ಲೂ ಕೆಲವೆಡೆ ಶೀಟ್ ಹಾರಿ ಹೋಗಿ ಹಾನಿಯಾಗಿರುವುದಾಗಿ ಎಂದು ತಿಳಿದು ಬಂದಿದೆ.