ಸಂಪಾಜೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾಗಿ ಲೋಕ್ಯಾ ನಾಯ್ಕ ಬಿ.

0

ಸಂಪಾಜೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾಗಿ ಲೋಕ್ಯಾ ನಾಯ್ಕ ಬಿ. ನೇಮಕಗೊಂಡಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದ ಕೃಷಿಕರಾದ ಶ್ರೀಮತಿ ಲಕ್ಷ್ಮಿಬಾಯಿ ಹಾಗೂ ದಿ.ಭೀಮನಾಯ್ಕ ದಂಪತಿಗಳ ೫ನೇ ಮಗನಾಗಿ ೧೨.೦೭.೧೯೭೧ ರಲ್ಲಿ ಲೋಕ್ಯಾ ನಾಯ್ಕರು ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮದಲ್ಲಿ ಮುಗಿಸಿ, ಪ್ರೌಢಶಾಲಾ ಕಲಿಕೆಯನ್ನು ಶ್ರೀಗುರು ಸಿದ್ಧರಾಮೇಶ್ವರ ಪ್ರೌಢಶಾಲೆ, ಬಿಆರ್‌ಟಿ ಕಾಲೋನಿಯಲ್ಲಿ ಕಲಿತರು. ಪಿಯುಸಿಯನ್ನು ತಾಲೂಕು ಕೇಂದ್ರವಾದ ಚನ್ನಗಿರಿಯ ಶ್ರೀ ಮಣ್ಣಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ, ಬಿಎ ಪದವಿಯನ್ನು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪಡೆದರು. ಬಿ.ಎಡ್ ಪದವಿಯನ್ನು ಚಿಕ್ಕಮಗಳೂರಿನ ಎಂ.ಎಲ್. ಎಂ.ಎನ್. ಕಾಲೇಜಿನಲ್ಲಿ ಪಡೆದು ಎಂ.ಎ ಪದವಿಯನ್ನು ಧಾರವಾಡದಲ್ಲಿ ಪಡೆದರು.
೧೯೯೭ ರಲ್ಲಿ ಸಂಪಾಜೆ ಪ್ರೌಢಶಾಲಾ ವಿಭಾಗದಲ್ಲಿ ಸಹಶಿಕ್ಷಕರಾಗಿ ಸೇರ್ಪಡೆಗೊಂಡರು. ೨೦೦೩ ರಲ್ಲಿ ಕಾಲೇಜು ವಿಬಾಗದಲ್ಲಿ ಇತಿಹಾಸ ಉಪನ್ಯಾಸಕರಾಗಿ ಭಡ್ತಿ ಪಡೆದರು. ಪ್ರಸ್ತುತ ೨೦೨೩ ರಲ್ಲಿ ಸಂಸ್ಥೆಯ ಪ್ರಾಂಶುಪಾಲರಾಗಿ ಪದೋನ್ನತಿ ಪಡೆದರು.
ಲೋಕ್ಯಾ ನಾಯ್ಕರ ಪತ್ನಿ ಯಶೋಧರವರು ಗೃಹಿಣಿಯಾಗಿದ್ದಾರೆ. ಮಗಳು ದೇವಿಕಾರಾಣಿ ಬಿ.ಎಲ್. ಜರ್ಮನಿಯಲ್ಲಿ ಬಿ.ಎಸ್ಸಿ ಹಾರ್ಟಿಕಲ್ಚರ್ ಪದವಿಯನ್ನು, ಪುತ್ರ ಪೃಥ್ವಿರಾಜ್ ಬಿ.ಎಲ್. ವೆಂಗಳೂರಿನ ಪಿಇಎಸ್ ಯುನಿರ್ವಸಿಟಿಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾರೆ.