ಸುಳ್ಯಪಿ.ಎಲ್.ಡಿ.ಬ್ಯಾಂಕಿನಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ ರವರಿಗೆ ಅಭಿನಂದನೆ

0

ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕಿ ಕು.ಭಾಗೀರಥಿ ಮುರುಳ್ಯ ರವರನ್ನು ಮೇ.19 ರಂದು ನಡೆದ ಬ್ಯಾಂಕಿನ ಸಾಮಾನ್ಯ ಸಭೆಯಲ್ಲಿ ಅಭಿನಂದಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಪ್ರಭಾಕರ ನಾಯಕ್ ರವರು ಮಾತನಾಡಿ “ನಮ್ಮ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿಯಾಗಿ ಆಯ್ಕೆಗೊಂಡಿರುವುದು ನಮಗೆ ಹೆಮ್ಮೆ ತಂದಿದೆ. ಈ ಹಿಂದೆ ನಿರ್ದೇಶಕ ರಾಗಿದ್ದ ಡಿ.ವಿ.ಸದಾನಂದ ರವರು ನಮ್ಮ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ ಬಳಿಕ ಶಾಸಕರಾಗಿ,ಸಚಿವರಾಗಿ, ರಾಜ್ಯದ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದವರಾಗಿದ್ದರು.
ಇದೀಗ ಎರಡನೇಯವರಾಗಿ ಕು.ಭಾಗೀರಥಿ ಯವರು ಶಾಸಕಿಯಾಗಿರುವುದು ನಮಗೆಲ್ಲರಿಗೂ ತುಂಬಾ ಸಂತೋಷ ತಂದಿದೆ ಎಂದು ಹೇಳಿದರು. ಬ್ಯಾಂಕಿನ ಮಾಜಿ ಅಧ್ಯಕ್ಷ ವಿಶ್ವನಾಥ ಬಿಳಿಮಲೆ ಯವರು ಮಾತನಾಡಿ ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿ ರಾಜ್ಯದಲ್ಲಿ ಮಾದರಿ ಶಾಸಕಿಯಾಗಲೆಂದು
ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಸೋಮನಾಥ ಕೆ, ಕೋಶಾಧಿಕಾರಿ ಶ್ರೀಮತಿ ಸುವರ್ಣಿನಿ ಎನ್.ಎಸ್, ನಿರ್ದೇಶಕರಾದ ರಮೇಶ್ ಪಿ,ಮಹಾವೀರ ಬಿ, ಶೇಷಪ್ಪ ಪಿ, ಭಗೀರಥ ಕೋಲ್ಚಾರು, ಶ್ರೀಮತಿ ದೇವಮ್ಮ ಎಸ್,ನಾಮ ನಿರ್ದೇಶಕ ಚಂದ್ರಶೇಖರ ಎಂ, ಬ್ಯಾಂಕಿನ ವ್ವವಸ್ಥಾಪಕಿ ಶ್ರೀಮತಿ ಉಷಾ ಸುವರ್ಣ ಹಾಗೂ ಸಿಬ್ಬಂದಿ ವರ್ಗದ ವರು ಉಪಸ್ಥಿತರಿದ್ದರು.