ನನ್ನ ಜೀವನ ನನ್ನ ಸ್ವಚ್ಛ ನಗರ

0


ನ.ಪಂ. ನಲ್ಲಿ ಮರುಬಳಕೆ – ಪುನರ್ ಬಳಕೆ ವಸ್ತು ಖರೀದಿ ಕೇಂದ್ರ


ಮೇ.20-ಜೂ.5 : ಸಾರ್ವಜನಿಕರು ಪ್ರಯೋಜನೆ ಪಡೆಯಲು ಮನವಿ

ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ ನಗರ -೨.೦ ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಪರಿಣಾಮ ಬೀರುವ ಅಭಿಯಾನವನ್ನು ಪ್ರಾರಂಭಿಸಿದ್ದು, ನವೀಕರಿಸಿ ಮರುಬಳಸ ಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವ ಪ್ರಮುಖ ಉzಶದಿಂದ ನನ್ನ ಜೀವನ ನನ್ನ ಸ್ವಚ್ಛ ನಗರ ಯೋಜನೆ ಕಾರ್ಯಕ್ರಮದಡಿ ಮರುಬಳಕೆ ಮತ್ತು ಪುನರ್ ಬಳಕೆ ಕೇಂದ್ರವನ್ನು ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಸುಳ್ಯ ನಗರ ಪಂಚಾಯತ್ ತೀರ್ಮಾನಿಸಿದೆ ಎಂದು ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದ್ದಾರೆ.


ಈ ಯೋಜನೆಗಾಗಿ ನಗರ ಪಂಚಾಯತ್ ಕಚೇರಿ ಬಳಿ ಮರುಬಳಕೆ – ಪುನರ್ ಬಳಕೆ ವಸ್ತುಗಳನ್ನು ಪಡೆಯಲು ಕೇಂದ್ರವನ್ನು ತೆರೆಯಲಾಗಿದ್ದು ಮೇ.೨೦ರಿಂದ ಜೂ.೫ರ ತನಕ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ತಮ್ಮಲ್ಲಿರುವ ತಮಗೆ ಬೇಡವಾಗಿರುವ ಆಟಿಕೆ ವಸ್ತುಗಳನ್ನು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಳಸಿದ ಬಟ್ಟೆ, ದಿನ ಪತ್ರಿಕೆಗಳು, ಹಳೆಯ ಪುಸ್ತಕಗಳು, ಎಲೆಕ್ಟ್ರಾನಿಕ್ ವಸ್ತುಗಳಂತಹ ೬ ಬಗೆಯ ನವೀಕರಿಸಿ ಮರುಬಳಸ ಬಹುದಾಂತಹ ವಸ್ತುಗಳನ್ನು ನ.ಪಂ.ನ ಮರು ಪಡೆಯುವ ಸೌಲಭ್ಯ ಕೇಂದ್ರಕ್ಕೆ ನೀಡಿ ಈ ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ. ಭಾಗವಹಿಸಿದ ಸಾರ್ವಜನಿಕರಿಗೆ ಡಿಜಿಟಲ್ ಪ್ರಮಾಣ ಪತ್ರ ಹಾಗೂ ಪ್ರೋತ್ಸಾಹಕವನ್ನು ನೀಡಿ ಗೌರವಿಸಲಾಗುತ್ತದೆ.

LEAVE A REPLY

Please enter your comment!
Please enter your name here