ಐವರ್ನಾಡು : ಗ್ರಾಮೀಣ ಬೇಸಿಗೆ ಶಿಬಿರ ಉದ್ಘಾಟನೆ

0

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮೀಣ ಬೇಸಿಗೆ ಶಿಬಿರವು ಮೇ.20 ರಂದು ಉದ್ಘಾಟನೆಗೊಂಡಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶ್ರೀಮತಿ ಸುಜಾತ ಪವಿತ್ರಮಜಲು,ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್, ಸದಸ್ಯ ದೇವಿಪ್ರಸಾದ್ ಕೊಪ್ಪತ್ತಡ್ಕ ಉಪಸ್ಥಿತರಿದ್ದರು.
ಗ್ರಂಥಾಲಯ ಮೇಲ್ವಿಚಾರಕಿ ಲೀಲಾವತಿ ಸ್ವಾಗತಿಸಿ,ವಂದಿಸಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ತರಬೇತಿ,ಕ್ರಾಫ್ಟ್,ಡ್ಯಾನ್ಸ್ ತರಬೇತಿ,ಹಾಡು,ಯಕ್ಷಗಾನ ಕಲೆಗಳನ್ನು ಕಲಿಸಲಾಗುವುದು.