ಸಿದ್ಧರಾಮಯ್ಯ ಸಿಎಂ – ಡಿಕೆಶಿ ಡಿಸಿಎಂ ಆಗಿ ಪ್ರಮಾಣವಚನ

0

ಸುಳ್ಯ ಬಸ್ ನಿಲ್ದಾಣದ ಬಳಿ ಸಂಭ್ರಮಾಚರಣೆ

ಕೆಲಸ ಮಾಡದೆ ಮೋದಿ ಬಂದ್ರೆ ಓಟು ಬೀಳ್ತದೆ ಎಂಬ ಭ್ರಮೆ ಬೇಡ; ಜಯಪ್ರಕಾಶ್ ರೈ

ಜನಪರ ಆಡಳಿತಕ್ಕೆ ಕಾಂಗ್ರೆಸ್ ಗ್ಯಾರಂಟಿ; ವೆಂಕಪ್ಪ ಗೌಡ

ಕರ್ನಾಟಕ ಸರಕಾರದ ನೂತನ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಹಾಗು ೮ ಮಂದಿ ಸಂಪುಟ ದರ್ಜೆ ಸಚಿವರಾಗಿ ಇಂದು ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಸುಳ್ಯ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಯಿತು.
ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರಮಾಣವಚನ ಮಾಡುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಹೊಡೆಸಿ,ಘೋಷಣೆ ಕೂಗಿದರು.


ಸಭೆಯನ್ನುದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎನ್.ಜಯಪ್ರಕಾಶ್ ರೈ ಮಾತನಾಡಿ ಬಿಜೆಪಿಯವರಿಗೆ ಒಂದು ಭ್ರಮೆ ಇದೆ.ನಾವು ಕೆಲಸ ಮಾಡದೆ, ಅಕ್ರಮ ಮಾಡಿದ್ದರೂ ಚುನಾವಣೆ ಸಂದರ್ಭದಲ್ಲಿ ಮೋದಿ ಬಂದ್ರೆ ಜನ ಓಟು ಹಾಕುತ್ತಾರೆ ಕಲ್ಪನೆ ಇತ್ತು.ಈ ಚುನಾವಣೆಯಲ್ಲಿ ಅದು ಕೂಡ ನಡೆಯಲಿಲ್ಲ.ಜನರು ಅಭಿವೃದ್ದಿ ಬಯಸಿದ್ದಾರೆ.ಎಂದು ಹೇಳಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಸದೃಢವಾದ ಸರಕಾರ ರಚನೆಗೊಳ್ಳಲಿದ್ದು, ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನು ತಕ್ಷಣದಿಂದಲೇ ಜನರಿಗೆ ನೀಡಲಿದ್ದೇವೆ. ಕೇಂದ್ರ ಸರಕಾರ ಮತ್ತೆ ೨೦೦೦ ಮುಖ ಬೆಲೆಯ ನೋಟ್ ಬ್ಯಾನ್ ಮಾಡಲು ಮುಂದಾಗಿದ್ದು, ಅದರ ಮುದ್ರಣಕ್ಕಾಗಿ ಮಾಡಿದ ಕೋಟಿಗಟ್ಟಲೆ ವೆಚ್ಚಕ್ಕೆ ಯಾರು ಹೊಣೆ ಎಂದು ಕೇಳಿದರು.


ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ.ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಕೆ.ಗೋಕುಲ್ ದಾಸ್, ಹಮೀದ್ ಕುತ್ತಮೊಟ್ಟೆ, ಸತ್ಯಕುಮಾರ್ ಆಡಿಂಜ, ಮುತ್ತಪ್ಪ ಪೂಜಾರಿ ಮೊರಂಗಲ್ಲು, ಶ್ರೀಹರಿ ಕುಕ್ಕುಡೇಲು, ಇಸ್ಮಾಯಿಲ್ ಪಡ್ಪಿನಂಗಡಿ, ಪೂರ್ಣಚಂದ್ರ ಕಣೆಮರಡ್ಕ, ಬಾಲಕೃಷ್ಣ ಭಟ್ ಕೊಡೆಂಕಿರಿ, ರಾಜಾರಾಮ್ ಭಟ್ ಬೆಟ್ಟ, ಭೋಜಪ್ಪ ನಾಯ್ಕ ವಿನೋಬಾನಗರ, ಹಸೈನಾರ್ ಕೊಳೆಂಜಿಕೋಡಿ, ಭವಾನಿಶಂಕರ ಕಲ್ಮಡ್ಕ, ಹೂವಪ್ಪ ಗೌಡ ಆರ್ನೋಜಿ, ರಾಧಾಕೃಷ್ಣ ಅರಂಬೂರು, ನಂದರಾಜ್ ಸಂಕೇಶ, ಚೇತನ್ ಕಜೆಗದ್ದೆ, ಮುಜೀಬ್ ಪೈಚಾರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here